Publish Date: Sun, 20 Sep 2020 (12:10 IST)
Updated Date: Sun, 20 Sep 2020 (12:14 IST)
ಹೈದರಾಬಾದ್ : ಹಿಂದಿಯ ಹಿಟ್ ಸಿನಿಮಾ ‘ಅಂಧಾಧುನ್’ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಇದರಲ್ಲಿ ನಾಯಕನಾಗಿ ನಿತಿನ್ ನಟಿಸುತ್ತಿದ್ದಾರೆ ಎಂಬ ಮಾಹಿತಿ ಈ ಹಿಂದೆ ಕೇಳಿಬಂದಿತ್ತು. ಆದರೆ ಇದೀಗ ನಟಿಯ ಮಾಹಿತಿ ಬಹಿರಂಗಗೊಂಡಿದೆ.
ತೆಲುಗು ‘ಅಂಧಾಧುನ್’ ಸಿನಿಮಾದಲ್ಲಿ ನಿತಿನ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಅವರು ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ಅವರ ಜೊತೆ ಮತ್ತೊಬ್ಬ ನಾಯಕಿ ಕನ್ನಡದ ನಟಿ ನಭಾನಟೇಶ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.
ನಿತಿನ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಮರ್ಲಪಾಕಾ ಗಾಂಧಿ ನಿರ್ದೇಶನ ಮಾಡುತ್ತಿದ್ದಾರೆ. ನವೆಂಬರ್ ನಲ್ಲಿ ಈ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.