Select Your Language

Notifications

webdunia
webdunia
webdunia
webdunia

ಹೈದರಾಬಾದ್ ನಲ್ಲಿ ಮನೆ ಖರೀದಿಸಿದ ರಶ್ಮಿಕಾ; ನೆಟ್ಟಿಗರು ಗರಂ

ಹೈದರಾಬಾದ್ ನಲ್ಲಿ ಮನೆ ಖರೀದಿಸಿದ ರಶ್ಮಿಕಾ; ನೆಟ್ಟಿಗರು ಗರಂ
ಹೈದರಾಬಾದ್ , ಸೋಮವಾರ, 21 ಸೆಪ್ಟಂಬರ್ 2020 (13:12 IST)
ಹೈದರಾಬಾದ್ : ತೆಲುಗು ಸಿನಿಮಾದಲ್ಲೇ ಬ್ಯುಸಿಯಾದ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಕರ್ನಾಟಕ ತೊರೆದು ಹೈದರಾಬಾದ್ ನಲ್ಲೇ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಹೌದು. ಇದಕ್ಕೆ ಕಾರಣವೇನೆಂದರೆ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ  ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು ಖರೀದಿ ಮಾಡಿದ್ದು, ಅಲ್ಲಿಯೇ ಸಿನಿಮಾ ಮಾತುಕತೆ, ಫೋಟೋಶೂಟ್ ಮಾಡುತ್ತಿದ್ದಾರಂತೆ.
ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅವಕಾಶ ಮಾಡಿಕೊಟ್ಟಿದ್ದು ಕನ್ನಡ ಚಿತ್ರರಂಗ, ಕರ್ನಾಟಕ, ಆದರೆ ಹುಡುಕಿಕೊಂಡು ಹೋಗಿದ್ದು ಮಾತ್ರ ತೆಲುಗು ಚಿತ್ರರಂಗ ಎಂದು ಕಿಡಿಕಾರಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್ ಆಟವನ್ನು ಭರಪೂರ ಹೊಗಳಿದ ಕಿಚ್ಚ ಸುದೀಪ್