ಹೈದರಾಬಾದ್ : ನಟಿ ತಮನ್ನಾ ಭಾಟಿಯಾ ಈಗಾಗಲೇ eleven o clock ವೆಬ್ ಸರಣಿಯಲ್ಲಿ ನಟಿಸಿದ್ದರು. ಈಗ ಮತ್ತೊಂದು ವೆಬ್ ಸರಣಿಯಲ್ಲಿ ನಟಿಸಲು ನಿರ್ಧರಿಸಿದ್ದು, ಸದ್ಯದಲ್ಲೇ ಇದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ.
ಆದರೆ ಈ ನಡುವೆ eleven o clock ವೆಬ್ ಸರಣಿಯಲ್ಲಿ ನಟಿ ತಮನ್ನಾ ಭಾರೀ ಮೊತ್ತವನ್ನು ಪಡೆದಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ನಡೆದ ಮಾಧ್ಯಮಗಳ ಸಂವಾದದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಈ ವದಂತಿಯನ್ನು ನಿರಾಕರಿಸಿದ್ದಾರೆ.
ತಾವು ವೆಬ್ ಸರಣಿಯಲ್ಲಿ ಹೊಸ ಅನುಭವಗಳಿಗಾಗಿ ನಟಿಸುತ್ತಿದ್ದೇನೆ ಹೊರತು ಹಣಕ್ಕಾಗಿ ಅಲ್ಲ ಎಂದು ನಟಿ ತಿಳಿಸಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಕೇಳಿಬಂದ ವದಂತಿಗೆ ಬ್ರೇಕ್ ಹಾಕಿದ್ದಾರೆ.