Select Your Language

Notifications

webdunia
webdunia
webdunia
webdunia

'ರಾಧೆಶ್ಯಾಮ' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ

'ರಾಧೆಶ್ಯಾಮ' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ
ಹೈದರಾಬಾದ್ , ಭಾನುವಾರ, 25 ಏಪ್ರಿಲ್ 2021 (12:06 IST)
ಹೈದರಾಬಾದ್ : ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರೊಮ್ಯಾಂಟಿಕ್ ಚಿತ್ರ ‘ರಾಧೆ ಶ್ಯಾಮ್’ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆಯಂತೆ.

ಈ ಚಿತ್ರವನ್ನು ರಾಧಾ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಮತ್ತು ಗೋಪಿ ಕೃಷ್ಣ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದೀಗ  ಪ್ರಭಾಸ್ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹಾಗಾಗಿ ನಿರ್ಮಾಪಕರು ರಾಧೆ ಶ್ಯಾಮ್ ಚಿತ್ರದ ವೇಳಾಪಟ್ಟಿಯನ್ನು ಹಿಂತೆಗೆದುಕೊಂಡಿದ್ದಾರೆ. ಮತ್ತು ಅನುಕೂಲಕರ ಸನ್ನಿವೇಶಗಳು ಸಿಕ್ಕಿದ ಬಳಿಕವೇ ಶೂಟಿಂಗ್ ಪುನರಾರಂಭಗೊಳ‍್ಳುತ್ತದೆ  ಎಂದು ತಿಳಿಸಿದ್ದಾರೆ.

ಅಲ್ಲದೇ ಕೊರನಾ ಕಾರಣದಿಂದಾಗಿ ಜೂನ್ 30ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಮುಂದೂಡಿದ್ದಾರೆ. ಹಾಗೇ ಕೊರೊನಾ 2ನೇ ಅಲೆ ಜೂನ್ ನಂತರ ಇಳಿಯುವ ನಿರೀಕ್ಷೆ ಇದೆ ಅದರ ನಂತರವೇ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಮಾಡಲ್ವಾ? ಅಭಿಮಾನಿಯ ಪ್ರಶ್ನೆಗೆ ನಟಿ ರಮ್ಯಾ ಪ್ರತಿಕ್ರಿಯೆ ನೋಡಿ