Publish Date: Sun, 25 Apr 2021 (10:16 IST)
Updated Date: Sun, 25 Apr 2021 (10:19 IST)
ಹೈದರಾಬಾದ್ : ಟಾಲಿವುಡ್ ನಟ ರವಿ ತೇಜ ಅವರ ಅಭಿನಯದ ಕ್ರ್ಯಾಕ್ ಚಿತ್ರ ಈ ಹಿಂದೆ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್ಬಾಸ್ಟರ್ ಆಗಿತ್ತು. ಸದ್ಯಕ್ಕೆ ನಟ ರವಿ ತೇಜ ಖಿಲಾಡಿ ಚಿತ್ರದಲ್ಲಿ ನಟಿಸುತ್ತಿದ್ದು, ಇದೀಗ ಅವರು ಮತ್ತೊಂದು ಚಿತ್ರದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರಂತೆ.
ಇತ್ತೀಚಿನ ಮಾಹಿತಿ ಪ್ರಕಾರ ಮುಂಬರುವ ತೆಲುಗು ಚಿತ್ರಕ್ಕಾಗಿ ರವಿ ತೇಜ ಅವರು ಡೊಂಗಾಟ ಖ್ಯಾತಿಯ ನಿರ್ದೇಶಕ ವಂಶಿ ಕೃಷ್ಣ ಅವರೊಂದಿಗೆ ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ಪೀಪಲ್ ಮೀಡಿಯಾ ನಿರ್ಮಿಸಲಿದೆ ಎನ್ನಲಾಗಿದೆ.
ಇತ್ತೀಚೆಗೆ ವಂಶಿ ಕೃಷ್ಣ ಅವರು ರವಿತೇಜ ಅವರನ್ನು ಭೇಟಿಯಾಗಿ ಚಿತ್ರಕಥೆಯನ್ನು ನಿರೂಪಿಸಿದ್ದಾರೆ. ನಟ ರವಿತೇಜ ಅವರಿಗೆ ನಿರೂಪಣೆ ಯಿಂದ ಸಂತೋಷವಾಗಿದ್ದರೂ ಅವರು ಇನ್ನು ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.