Publish Date: Sat, 24 Apr 2021 (14:43 IST)
Updated Date: Sat, 24 Apr 2021 (14:45 IST)
ಚೆನ್ನೈ : ಏಪ್ರಿಲ್ 30ರಂದು ದೆಹಲಿಯಲ್ಲಿ ನಡೆಯಲಿರುವ 11ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2021 ರಲ್ಲಿ ನಿರ್ಮಾಪಕ ಲೋಕೇಶ್ ಕುಮಾರ್ ಅವರ ಎನ್ 4ಅನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
ಈ ವಿಚಾರ ತಿಳಿದ ನಿರ್ಮಾಪಕ ಲೋಕೇಶ್ ಕುಮಾರ್ ಅವರು ಸಂತೋಷಗೊಂಡಿದ್ದಾರೆ. ಚಿತ್ರ ನಿರ್ಮಿಸುವಾಗ ತುಂಬಾ ಕಷ್ಟಕರವಾಗಿತ್ತು. ಆದರೆ ಈಗ ಚಿತ್ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಕೇಳಿ ಸಾಕಷ್ಟು ಭರವಸೆ ಮತ್ತು ಸಕರಾತ್ಮಕತೆಯನ್ನು ಮೂಡಿಸಿದೆ ಎಂದು ಸಂಭ್ರಮಿಸಿದ್ದಾರೆ.
ಅಲ್ಲದೇ ಒಂದು ವೇಳೆ ಕೊರೊನಾ ವೇಳೆ ಈ ಕಾರ್ಯಕ್ರಮ ನಡೆದರೆ ಖುದ್ದಾಗಿ ಹಾಜರಾಗುವುದಾಗಿ ತಿಳಿಸಿದ್ದಾರೆ. ಹಾಗೇ ಪ್ರೇಕ್ಷಕರು ಈ ಚಿತ್ರವನ್ನು ಆನಂದಿಸುತ್ತಾರೆ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.