ಚೆನ್ನೈ : ತಮಿಳು ನಟ ವಿಷ್ಣು ವಿಶಾಲ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಏಪ್ರಿಲ್ 22ರಂದು ಹೈದರಾಬಾದ್ ನಲ್ಲಿ ವಿವಾಹವಾಗಿದ್ದಾರೆ.
ಈ ವಿವಾಹ ಸಮಾರಂಭಕ್ಕೆ ಅವರ ಕುಟುಂಬ ಸದಸ್ಯರು ಹಾಗೂ ಆಪ್ತರು ಭಾಗವಹಿಸಿದ್ದರು. ಮದುವೆಯ ವೇಳೆ ಜ್ವಾಲಾ ಗುಟ್ಟಾ ಸಾಂಪ್ರದಾಯಿಕ ರೇಷ್ಮೆ ಸೀರೆಯನ್ನು ಧರಿಸಿದ್ದರು. ವಿಷ್ಣು ವಿಶಾಲ್ ಅವರು ಸಾಂಪ್ರದಾಯಿಕ ಧೋತಿ ಮತ್ತು ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಏಪ್ರಿಲ್ 21ರಂದು ವಿವಾಹ ಪೂರ್ವ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಇವರ ಮದುವೆ ಹಾಗೂ ಪೂರ್ವಭಾವಿ ಸಮಾರಂಭಗಳ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.