Select Your Language

Notifications

webdunia
webdunia
webdunia
webdunia

100 ಮಿಲಿಯನ್ ವೀವ್ಸ್ ಪಡೆದ ಮಹೇಶ್ ಬಾಬು ಚಿತ್ರದ ಹಾಡು

100 ಮಿಲಿಯನ್ ವೀವ್ಸ್ ಪಡೆದ ಮಹೇಶ್ ಬಾಬು ಚಿತ್ರದ ಹಾಡು
ಹೈದರಾಬಾದ್ , ಭಾನುವಾರ, 25 ಏಪ್ರಿಲ್ 2021 (12:09 IST)
ಹೈದರಾಬಾದ್ : ತೆಲುಗು ಸೂರ್ ಸ್ಟಾರ್ ಮಹೇಶ್ ಬಾಬು ಅವರು ಕೊನೆಯ ಬಾರಿಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಬ್ಲಾಕ್ ಬಾಸ್ಟರ್ ಹಿಟ್ ಚಿತ್ರ ‘ಸರಿಲೆರು ನೀಕೆವ್ವರು’. ಇದನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ.

ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡಿದ್ದು, ಇತ್ತೀಚೆಗೆ ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ‍್ಣ ಅಭಿನಯದ ಮೈಲ್ಡ್ ಬ್ಲಾಕ್ ಹಾಡು ದಾಖಲೆಯನ್ನು ಸೃಷ್ಟಿಸಿದೆ. ಈ ಹಾಡಿನ ವಿಡಿಯೋವನ್ನು ಫೆಬ್ರವರಿ 29 2020ರಂದು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಅದು 100 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆಯಂತೆ.

ಈ ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ರಶ್ಮಿಕಾ ಮಂದಣ‍್ಣ ನಟಿಸಿದ್ದಾರೆ. ಇದರಲ್ಲಿ ಮಹೇಶ್ ಬಾಬು ಸೇನಾಧಿಕಾರಿ ಮೇಜರ್ ಅಜಯ್ ಕೃಷ್ಣ ಅವರ ಪಾತ್ರದಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ರಾಧೆಶ್ಯಾಮ' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ