Select Your Language

Notifications

webdunia
webdunia
webdunia
webdunia

ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮಾತನಾಡಿ ನೆಟಿಜನ್ ಕೆಂಗಣ್ಣಿಗೆ ಗುರಿಯಾದ ನಟಿ ಪೂಜಾ ಹೆಗ್ಡೆ

ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮಾತನಾಡಿ ನೆಟಿಜನ್ ಕೆಂಗಣ್ಣಿಗೆ ಗುರಿಯಾದ ನಟಿ ಪೂಜಾ ಹೆಗ್ಡೆ
ಹೈದರಾಬಾದ್ , ಸೋಮವಾರ, 9 ನವೆಂಬರ್ 2020 (14:07 IST)
ಹೈದರಾಬಾದ್ : ಪೂಜಾ ಹೆಗ್ಡ್ ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಅವರು ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ಚಿತ್ರಗಳಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಮಾತನಾಡಿ ನೆಟಿಜನ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು. ನಟಿ ಪೂಜಾ ಹೆಗ್ಡೆ ರಾಷ್ಟ್ರೀಯ ಮಾಧ್ಯಮಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ತೆಲುಗು ಪ್ರೇಕ್ಷಕರು ಚಲನಚಿತ್ರಗಳನ್ನು ಉತ್ಸಾಹದಿಂದ ಪ್ರೀತಿಸುತ್ತಾರೆ. ಸ್ಟಾರ್ ಗಳನ್ನು ದೇವರುಗಳಂತೆ ಪೂಜಿಸುತ್ತಾರೆ ಎಂದು ಹೊಗಳಿದ್ದಾರೆ. ಆದರೆ ಅದೇ ವೇಳೆ ಅವರು, ದಕ್ಷಿಣ ಭಾರತದ ಚಲನಚಿತ್ರ ನಿರ್ಮಾಪಕರು ಮಾತ್ರ ನಮ್ಮನ್ನು  ಚಿಕ್ಕ ಉಡುಪಿನಲ್ಲಿನೋಡಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು,ಒಬ್ಬ ಸ್ಟಾರ್ ನಟಿಯಾಗಿ ಚಿತ್ರರಂಗದ ಬಗ್ಗೆ ಹೀಗೆ ಹೇಳಿಕೆ ನೀಡಿದ್ದು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡ ವಿದ್ಯಾರ್ಥಿಗಳ ಸಹಾಯಕ್ಕೆ ಟ್ಯಾಬ್ ವಿತರಿಸಲು ಮುಂದಾದ ಶಿವರಾಜ್ ಕುಮಾರ್