ಬೆಂಗಳೂರು: ಕೊರೋನಾ ಬಂದ ಬಳಿಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಖಾಯಂ ಆಗಿದೆ. ಆದರೆ ಎಷ್ಟೋ ಬಡ ವಿದ್ಯಾರ್ಥಿಗಳು ಇದಕ್ಕೆ ಬೇಕಾದ ಸೌಕರ್ಯವಿಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.
ಇಂತಹ ಬಡ ವಿದ್ಯಾರ್ಥಿಗಳ ನೆರವಿಗೆ ನಟ ಶಿವರಾಜ್ ಕುಮಾರ್ ಮುಂದೆ ಬಂದಿದ್ದಾರೆ. ಬಡ ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ನೆರವಾಗಲು ಶಿವಣ್ಣ ದಂಪತಿಗಳು ನೂರು ಟ್ಯಾಬ್ ಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ನಮ್ಮಿಂದಾದ ಸಹಾಯ ಮಾಡಬೇಕು ಎಂದು ನಾನು ಮತ್ತು ಪತ್ನಿ ಗೀತಾ ಯೋಚಿಸುತ್ತಿದ್ದೆವು. ನಮ್ಮಿಂದಾದ ಸಹಾಯ ಮಾಡಿದರೆ ಅದಕ್ಕಿಂತ ಒಳ್ಳೆಯ ಕೆಲಸ ಬೇರೊಂದಿಲ್ಲ. ಹಾಗಾಗಿ ಟ್ಯಾಬ್ ವಿತರಿಸಬೇಕೆಂದು ನಿರ್ಧರಿಸಿದ್ದೇವೆ ಎಂದು ಶಿವಣ್ಣ ಹೇಳಿದ್ದಾರೆ.