Publish Date: Sun, 08 Nov 2020 (09:32 IST)
Updated Date: Sun, 08 Nov 2020 (09:33 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಸರಳತೆಗೆ ಇನ್ನೊಂದು ಹೆಸರು ಎಂಬುದು ಇದೀಗ ಸಾಬೀತಾಗಿದೆ. ದಾಂಡೇಲಿಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಮಣ್ಣಿನ ನೆಲದಲ್ಲಿ ಕೂತು ಬಾಳೆ ಎಲೆಯಲ್ಲಿ ಸಾಮಾನ್ಯರಂತೆ ಊಟ ಮಾಡುತ್ತಿರುವ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪವರ್ ಸ್ಟಾರ್ ಸಾಮಾನ್ಯರೊಡನೆ ಈ ರೀತಿ ತೀರಾ ಸಾಮಾನ್ಯರಂತೆ ಕುಳಿತು ಊಟ ಮಾಡುತ್ತಿರುವುದನ್ನು ನೋಡಿದ ಅಭಿಮಾನಿಗಳು ಸರಳತೆಗೆ ಇನ್ನೊಂದು ಹೆಸರೇ ಅಪ್ಪು ಎಂದು ಕೊಂಡಾಡಿದ್ದಾರೆ. ಒಳ್ಳೆಯ ಊಟ ಎಂದರೆ ಎಲ್ಲೇ ಆದರೂ ಸಂಕೋಚ ಬಿಟ್ಟು ಊಟ ಮಾಡ್ತೀನಿ ಎಂದು ಪವರ್ ಸ್ಟಾರ್ ಈ ಹಿಂದೆ ಅನೇಕಬಾರಿ ಹೇಳಿದ್ದರು. ಇದೀಗ ತಾವೊಬ್ಬ ಸ್ಟಾರ್ ಎನ್ನುವುದನ್ನೂ ಮರೆತು ಸಾಮಾನ್ಯರಂತೆ ನಡೆದುಕೊಳ್ಳುವ ಮೂಲಕ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.