Publish Date: Sun, 08 Nov 2020 (09:52 IST)
Updated Date: Sun, 08 Nov 2020 (09:53 IST)
ಬೆಂಗಳೂರು: ದೀಪಾವಳಿಗೆ ಈ ಬಾರಿ ಪಟಾಕಿ ಸಿಡಿಸುವುದರ ಮೇಲೆ ರಾಜ್ಯ ಸರ್ಕಾರ ಕಡಿವಾಣ ಹಾಕುವ ನಿರ್ಧಾರ ಮಾಡಿದ್ದರ ಬಗ್ಗೆ ನಟ ದಿಗಂತ್ ಪ್ರತಿಕ್ರಿಯಿಸಿದ್ದಾರೆ.
ಕೊರೋನಾ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಹಸಿರುವ ಪಟಾಕಿಯನ್ನು ಬೆಂಬಲಿಸುವ ಸಿಎಂ ಯಡಿಯೂರಪ್ಪ ನಿರ್ಧಾರವನ್ನು ಸ್ವಾಗತಿಸಿರುವ ದಿಗಂತ್ ಇಂತಹದ್ದೊಂದು ಕ್ರಮದ ಅಗತ್ಯವಿತ್ತು. ಥ್ಯಾಂಕ್ಯೂ ಎಂದು ಪ್ರತಿಕ್ರಿಯಿಸಿದ್ದಾರೆ. ದಿಗಂತ್ ಆಗಾಗ ಪರಿಸರದ ಬಗ್ಗೆ ಕಾಳಜಿಯಿರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿರುತ್ತಾರೆ. ಇದೀಗ ಹಸಿರು ಪಟಾಕಿ ಬಳಸಲು ಮುಖ್ಯಮಂತ್ರಿ ಆದೇಶ ನೀಡಿರುವುದನ್ನು ಸ್ವಾಗತಿಸಿದ್ದಾರೆ.