Publish Date: Mon, 09 Nov 2020 (10:08 IST)
Updated Date: Mon, 09 Nov 2020 (10:10 IST)
ಬೆಂಗಳೂರು: ಕನ್ನಡ ಚಿತ್ರರಂಗದ ಕ್ರಿಯಾಶೀಲ ನಟ, ನಿರ್ದೇಶಕ, ಎಲ್ಲರ ಮೆಚ್ಚಿನ ಆಟೋ ರಾಜ ಶಂಕರ್ ನಾಗ್ ಅವರ ಜನ್ಮದಿನ ಇಂದು. ಶಂಕ್ರಣ್ಣನ ಜನ್ಮದಿನಕ್ಕೆ ಸ್ಯಾಂಡಲ್ ವುಡ್ ನಟರು, ಅಭಿಮಾನಿಗಳು ಅವರ ಸ್ಮರಣೆ ಮಾಡಿದ್ದಾರೆ.
ಕಿಚ್ಚ ಸುದೀಪ್ ನೀವು ಎಲ್ಲರ ಹೀರೋ ಎಂದರೆ, ರಮೇಶ್ ಅರವಿಂದ್ ಶಂಕರ್ ಜತೆಗಿನ ಹಳೆಯ ಫೋಟೋ ಪ್ರಕಟಿಸಿ ಅವರನ್ನು ಸ್ಮರಿಸಿಕೊಂಡಿದ್ದಾರೆ. ನಟಿ ತಾರಾ ಅನುರಾಧ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ಶಂಕರ್ ನಾಗ್ ಸ್ಮರಣೆ ಮಾಡಿದ್ದಾರೆ.