Select Your Language

Notifications

webdunia
webdunia
webdunia
webdunia

ಮದುವೆಯಾದ ಕೇವಲ 2 ವಾರಗಳಲ್ಲಿ ಶೂಟಿಂಗ್ ಹಾಜರಾಗಲಿರುವ ನಟಿ ಕಾಜಲ್ ಅಗರ್ ವಾಲ್

ಮದುವೆಯಾದ ಕೇವಲ 2 ವಾರಗಳಲ್ಲಿ ಶೂಟಿಂಗ್ ಹಾಜರಾಗಲಿರುವ ನಟಿ ಕಾಜಲ್ ಅಗರ್ ವಾಲ್
ಹೈದರಾಬಾದ್ , ಶನಿವಾರ, 7 ನವೆಂಬರ್ 2020 (09:35 IST)
ಹೈದರಾಬಾದ್ : ಟಾಲಿವುಡ್ ಸ್ಠಾರ್ ನಟಿ ಕಾಜಲ್ ಅಗರ್ ವಾಲ್ ಅವರು ಇತ್ತೀಚೆಗೆ ತಮ್ಮ ಗೆಳೆಯನೊಂದಿಗೆ ವಿವಾಹ ಮಾಡಿಕೊಂಡು ಇದೀಗ ಮದುವೆಯಾದ ಕೇವಲ 2 ವಾರಗಳ ಬಳಿಕ ಮತ್ತೆ ಚಿತ್ರದ ಶೂಟಿಂಗ್ ಗೆ ಹೊರಟಿದ್ದಾರೆ.

ಹೌದು. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ನಟಿಸುತ್ತಿದ್ದು, ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ನವೆಂಬರ್ 9ರಂದು ಪುನರಾರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕಾಜಲ್ ಆಚಾರ್ಯ ಸೆಟ್ ಗೆ ತೆರಳಲು ಸಿದ್ಧರಾಗಿದ್ದಾರೆ.

ಹೈದರಾಬಾದ್ ನಲ್ಲಿ ಆಚಾರ್ಯ ಚಿತ್ರದ ಶೂಟಿಂಗ್ ಇರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಆದಕಾರಣ ಕಾಜಲ್ ತಮ್ಮ ಪತಿ ಗೌತಮ್ ಜೊತೆ ಹೈದರಾಬಾದ್ ಗೆ ಬರಲಿದ್ದಾರೆ ಎನ್ನಲಾಗಿದೆ. ಜೊತೆಗೆ ಅಲ್ಲಿ ಟಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆ ಪಾರ್ಟಿ ನೀಡಲು ಆಯೋಜಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಶೂಟಿಂಗ್ ನಂತರ ಹನಿಮೂನ್ ಗೆ ಹೋಗಲು ನವದಂಪತಿ ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭುದೇವ್ ಹಾಗು ನಟಿ ನಯನತಾರಾ ಬೇರೆಯಾಗಲು ಮುಖ್ಯ ಕಾರಣ ಏನು ಗೊತ್ತಾ?