Publish Date: Sat, 07 Nov 2020 (09:30 IST)
Updated Date: Sat, 07 Nov 2020 (09:43 IST)
ಚೆನ್ನೈ : ನಟ ಪ್ರಭುದೇವ್ ಹಾಗು ನಟಿ ನಯನತಾರಾ ಅವರು ಪ್ರಭುದೇವ್ ನಿರ್ದೇಶನದ ವಿಲ್ಲು ಚಿತ್ರದ ಮೂಲಕ ಪ್ರೀತಿಸಲು ಶುರು ಮಾಡಿ ಬಳಿಕ ಅವರನ್ನು ಮದುವೆಯಾದರು.
ಆದರೆ ಕೊನೆಗೆ ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ಬೇರೆ ಬೇರೆಯಾದರು. ಅವರು ಯಾಕೆ ಬೇರೆಯಾದರು ಎಂಬ ವಿಚಾರವನ್ನು ನಯನತಾರಾ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಂದರ್ಶನದ ವೇಳೆ ಅವರು, ಭರವಸೆಯಿಲ್ಲದ ಪ್ರೀತಿ ಹೆಚ್ಚು ಕಾಲ ಉಳಿಯುವುದಿಲ್ಲ. ಮತ್ತು ಭರವಸೆ ಇಲ್ಲದ ಸ್ಥಳದಲ್ಲಿ ಒಟ್ಟಿಗೆ ವಾಸಿಸುವ ಬದಲು ಒಬ್ಬಂಟಿಯಾಗಿ ಬದುಕುವುದು ಉತ್ತಮ. ನಾನು ಹಳೆಯ ಪ್ರೇಮವನ್ನು ಮರೆತಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.