ಚೆನ್ನೈ : ತಮಿಳಿನ ಖ್ಯಾತ ನಟ ಅಜಿತ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಚಿತ್ರ ಬಿಡುಗಡೆಯ ದಿನ ಹತ್ತಿರ ಬಂದಾಗ ಅಭಿಮಾನಿಗಳು ಅವರ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.
ಅದೇರೀತಿ ಇದೀಗ ಇತ್ತೀಚಿನ ಚಿತ್ರವೊಂದರಲ್ಲಿ ಹಡಗಿನಲ್ಲಿ ಹೋರಾಡುವ ದೃಶ್ಯವೊಂದರ ಬಗ್ಗೆ ಅಭಿಮಾನಿಗಳು ಟ್ವೀಟರ್ ನಲ್ಲಿ ಸಾಕಷ್ಟು ಮಾತನಾಡುತ್ತಿದ್ದಾರೆ.
ಇದಕ್ಕೆ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಲೀ ವಿಟ್ಟೇಕರ್ ಪ್ರತಿಕ್ರಿಯೆ ನೀಡಿದ್ದು,ಈ ದೃಶ್ಯ ಒಳ್ಳೆಯ ನೆನಪುಗಳನ್ನು ಹೊಂದಿದೆ. ಅಜಿತ್ ಸಹಾಯವಿಲ್ಲದೆ ಈ ದೃಶ್ಯವನ್ನು ಅಷ್ಟು ಸುಂದರವಾಗಿ ತೆಗೆಯಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸೂಪರ್ ಫೈಟ್ ದೃಶ್ಯವನ್ನು ತೆಗೆಯುತ್ತೇನೆ. ಅಜಿತ್ ಜೊತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.