Publish Date: Fri, 06 Nov 2020 (09:39 IST)
Updated Date: Fri, 06 Nov 2020 (09:43 IST)
ದುಬೈ: ಐಪಿಎಲ್ 13 ಅಂತಿಮ ಘಟ್ಟಕ್ಕೆ ತಲುಪಿದ್ದು, ಇಂದಿನ ಪ್ಲೇ ಆಫ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಆರ್ ಸಿಬಿ ಇಂದು ಗೆದ್ದರೆ ಆ ಕನಸು ನನಸು ಮಾಡಿಕೊಳ್ಳಬಹುದಾಗಿದೆ. ಆದರೆ ಕಳೆದ ನಾಲ್ಕು ಪಂದ್ಯಗಳಿಂದ ಮಂಕಾಗಿರುವ ಆರ್ ಸಿಬಿ ಇಂದು ಮತ್ತೆ ಆಲ್ ರೌಂಡರ್ ಪ್ರದರ್ಶನ ನೀಡಲೇಬೇಕಾಗಿದೆ. ಆದರೆ ಅತ್ತ ಹೈದರಾಬಾದ್ ಕಳೆದ ಮೂರು ಪಂದ್ಯಗಳಿಂದ ಶೈನ್ ಆಗುತ್ತಿದ್ದು, ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಹೈದರಾಬಾದ್ ನ್ನು ಮಣಿಸಬೇಕಾದರೆ ಆರ್ ಸಿಬಿ ಘಟಾನುಘಟಿ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಲೇಬೇಕಾಗಿದೆ. ಸೋತರೆ ಬೆಂಗಳೂರು ಐಪಿಎಲ್ 13 ರಿಂದ ಹೊರಬೀಳಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.