Publish Date: Thu, 05 Nov 2020 (09:52 IST)
Updated Date: Thu, 05 Nov 2020 (09:54 IST)
ದುಬೈ: ಇಂದು 32 ನೇ ಜನ್ಮದಿನ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದೊಂದಿಗೆ ಮಧ್ಯರಾತ್ರಿ ಪಾರ್ಟಿ ಮಾಡಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.
ಪತ್ನಿ ಅನುಷ್ಕಾ ಶರ್ಮಾ, ಆರ್ ಸಿಬಿ ಹುಡುಗರೊಂದಿಗೆ ಮಧ್ಯರಾತ್ರಿ ಕೇಕ್ ಕಟ್ ಮಾಡಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗರ್ಭಿಣಿಯಾಗಿರುವ ಅನುಷ್ಕಾ ಈ ಬಾರಿಯೂ ಐಪಿಎಲ್ ಪ್ರವಾಸದ ವೇಳೆ ಪತಿ ಜತೆಗೇ ಪ್ರವಾಸ ಮಾಡುತ್ತಿದ್ದು ಚಿಯರ್ ಅಪ್ ಮಾಡುತ್ತಿದ್ದಾರೆ.