Publish Date: Fri, 06 Nov 2020 (09:58 IST)
Updated Date: Fri, 06 Nov 2020 (10:11 IST)
ದುಬೈ: ಐಪಿಎಲ್ 13 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತದಲ್ಲಿ ಹೈದರಾಬಾದ್ ತಂಡವನ್ನು ಸೋಲಿಸಬೇಕಾದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ಲಿಕ್ ಆಗಲೇಬೇಕು.
ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್ ಸಿಬಿ ಗೆಲ್ಲಬೇಕಾದರೆ ಕೊಹ್ಲಿ ಬ್ಯಾಟಿಂಗ್ ಗೇರ್ ಬದಲಾಯಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದುವರೆಗೆ ನಡೆದ ಪಂದ್ಯಗಳಲ್ಲಿ ಕೊಹ್ಲಿ ತಮ್ಮ ನ್ಯಾಚುರಲ್ ಬ್ಯಾಟಿಂಗ್ ಮಾಡಿಲ್ಲ. ಚೇಸಿಂಗ್ ವೀರ, ಬೌಲರ್ ಗಳನ್ನು ಚಿಂದಿ ಉಡಾಯಿಸುವುದರಲ್ಲಿ ಖ್ಯಾತರಾಗಿರುವ ಕೊಹ್ಲಿ ಈ ಐಪಿಎಲ್ ನಲ್ಲಿ ಇದುವರೆಗೆ ಅಂತಹ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಕೆಲವು ಉಪಯುಕ್ತ ಇನಿಂಗ್ಸ್ ಆಡಿದ್ದರೂ ಅದಕ್ಕೆ ಸಾಕಷ್ಟು ಬಾಲ್ ವ್ಯಯಿಸಿದ್ದಾರೆ. ಒಂದು ವೇಳೆ ಆರ್ ಸಿಬಿ ದೊಡ್ಡ ಮೊತ್ತ ಗಳಿಸಬೇಕಾದರೆ ಎಬಿಡಿ ಜತೆಗೆ ಕೊಹ್ಲಿ ಕೂಡಾ ಅಂತಹದ್ದೊಂದು ಹೊಡೆಬಡಿಯ ದೊಡ್ಡ ಇನಿಂಗ್ಸ್ ಆಡುವ ಅಗತ್ಯವಿದೆ. ಆ ಬದಲಾವಣೆ ಈ ಪ್ಲೇ ಆಫ್ ಹಂತದಲ್ಲೇ ನಡೆದರೆ ಆರ್ ಸಿಬಿಗೆ ಲಾಭವಾಗಲಿದೆ.