Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ನಾವು ನಡೆದುಕೊಂಡ ರೀತಿಯೇ ಸೋಲಿಗೆ ಕಾರಣ: ಸನ್ ರೈಸರ್ಸ್ ನಾಯಕ ವಾರ್ನರ್

ಮೈದಾನದಲ್ಲಿ ನಾವು ನಡೆದುಕೊಂಡ ರೀತಿಯೇ ಸೋಲಿಗೆ ಕಾರಣ: ಸನ್ ರೈಸರ್ಸ್ ನಾಯಕ ವಾರ್ನರ್
ದುಬೈ , ಸೋಮವಾರ, 9 ನವೆಂಬರ್ 2020 (09:32 IST)
ದುಬೈ: ಐಪಿಎಲ್ 13 ರ ಫೈನಲ್ಸ್ ತಲುಪುವ ಅವಕಾಶವನ್ನು ಮಿಸ್ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಸೋಲಿನ ಕಾರಣ ತಿಳಿಸಿದ್ದಾರೆ.


ಮೈದಾನದಲ್ಲಿ ನಾವು ನಡೆದುಕೊಂಡ ರೀತಿಯಿಂದಲೇ ನಮಗೆ ಡೆಲ್ಲಿ ವಿರುದ್ಧದ ಪ್ಲೇ ಆಫ್ ನಲ್ಲಿ ಸೋಲಾಯಿತು ಎಂದಿದ್ದಾರೆ ವಾರ್ನರ್. ‘ಎಲ್ಲರೂ ಡೆಲ್ಲಿ, ಮುಂಬೈ, ಆರ್ ಸಿಬಿ ಬಗ್ಗೆಯೇ ಮಾತನಾಡುತ್ತಿದ್ದರು. ನಾವು ಪ್ಲೇ ಆಫ್ ಹಂತಕ್ಕೆ ಏರುತ್ತೇವೆ ಎಂದು ಯಾರೂ ಲೆಕ್ಕ ಹಾಕಿರಲಿಲ್ಲ. ಆದರೆ ಇಲ್ಲಿಯವರೆಗೆ ಬಂದಿದ್ದಕ್ಕೆ ನನಗೆ ಹೆಮ್ಮೆಯಿದೆ. ಅದರೆ ಈ ಪಂದ್ಯದಲ್ಲಿ ನಾವು ನಡೆದುಕೊಂಡಿದ್ದು ಸರಿಯಿರಲಿಲ್ಲ. ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು, ಮಿಸ್ ಫೀಲ್ಡ್ ಪ್ರಮುಖ ಆಟಗಾರರು ಗಾಯದಿಂದಾಗಿ ಹೊರಗುಳಿದಿದ್ದು, ನಮ್ಮ ಸೋಲಿಗೆ ಕಾರಣವಾಯಿತು’ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಜುವೇಂದ್ರ ಚಾಹಲ್-ಧನಶ್ರೀ ಜೋಡಿಗೆ ಎಬಿಡಿ ವಿಲಿಯರ್ಸ್ ಸ್ಪೆಷಲ್ ಗಿಫ್ಟ್