Publish Date: Sun, 08 Nov 2020 (09:45 IST)
Updated Date: Sun, 08 Nov 2020 (09:46 IST)
ದುಬೈ: ಐಪಿಎಲ್ 13 ರ ಫೈನಲ್ ಗೆ ಲಗ್ಗೆಯಿಟ್ಟಿರುವ ಮುಂಬೈ ಇಂಡಿಯನ್ಸ್ ಗೆ ಎದುರಾಳಿಯಾಗಿ ಆಡುವ ಇನ್ನೊಂದು ತಂಡ ಯಾವುದು ಎಂಬುದು ಇಂದು ನಿರ್ಧಾರವಾಗಲಿದೆ.
ಇಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲಿಮಿನೇಟರ್ ಪಂದ್ಯ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮುಂಬೈ ಜತೆಗೆ ಫೈನಲ್ಸ್ ಆಡಲಿದೆ. ಪ್ರಸಕ್ತ ಸ್ಥಿತಿ ಗಮನಿಸಿದರೆ ಹೈದರಾಬಾದ್ ಫೇವರಿಟ್ ಎನಿಸುತ್ತದೆ. ಕಳೆದೊಂದಷ್ಟು ಪಂದ್ಯಗಳಿಂದ ಹೈದರಾಬಾದ್ ಪ್ರದರ್ಶನ ಸುಧಾರಿಸುತ್ತಾ ಬಂದಿದೆ. ಆದರೆ ಡೆಲ್ಲಿ ಬ್ಯಾಟಿಂಗ್ ನಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಈ ಹಿನ್ನಲೆಯಲ್ಲಿ ಹೈದರಾಬಾದ್ ಖಡಕ್ ಬೌಲಿಂಗ್ ಎದುರಿಸುವುದು ಡೆಲ್ಲಿಗೆ ಸವಾಲಾಗಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.