Publish Date: Sat, 07 Nov 2020 (09:45 IST)
Updated Date: Sat, 07 Nov 2020 (09:46 IST)
ದುಬೈ: ಐಪಿಎಲ್ 13 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದಿದ್ದಕ್ಕೆ ಕೊಹ್ಲಿಯ ಬ್ಯಾಟಿಂಗ್ ಕಾರಣವೆಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.
ಇದಕ್ಕೂ ಮೊದಲು ಗವಾಸ್ಕರ್ ಕೊಹ್ಲಿ ವಿರುದ್ಧ ಟೀಕೆ ಮಾಡುವಾಗ ಅನುಷ್ಕಾ ಹೆಸರನ್ನು ಉಲ್ಲೇಖಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಗವಾಸ್ಕರ್ ಕೊಹ್ಲಿಯ ಬ್ಯಾಟಿಂಗ್ ಶೈಲಿಯನ್ನು ಪ್ರಶ್ನಿಸಿದ್ದಾರೆ. ಕೊಹ್ಲಿಯ ಬ್ಯಾಟಿಂಗ್ ಗೆ ಒಂದು ಗುಣಮಟ್ಟವಿದೆ. ಅವರು ಆ ಗುಣಮಟ್ಟಕ್ಕೆ ತಕ್ಕುದಾದ ಬ್ಯಾಟಿಂಗ್ ನಡೆಸಲಿಲ್ಲ. ಇದೇ ಆರ್ ಸಿಬಿ ಹಿನ್ನಡೆಗೆ ಕಾರಣವಾಯಿತು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.