Publish Date: Mon, 09 Nov 2020 (09:21 IST)
Updated Date: Mon, 09 Nov 2020 (09:23 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರ ಸ್ತಂಬ ಎಬಿಡಿ ವಿಲಿಯರ್ಸ್ ಎಂದರೆ ಅಭಿಮಾನಿಗಳು ಮಾತ್ರವಲ್ಲ, ಸಹ ಕ್ರಿಕೆಟಿಗರೂ ಅವರನ್ನು ಗೌರವದಿಂದ ಕಾಣುತ್ತಾರೆ. ಇಂಥಾ ಎಲ್ಲರ ಪ್ರೀತಿಯ ಎಬಿಡಿ, ಸಹ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಅವರ ಭಾವೀ ಪತ್ನಿ ಧನಶ್ರೀಗೆ ವಿಶೇಷವಾದ ಉಡುಗೊರೆ ಕೊಟ್ಟಿದ್ದಾರೆ.
ಆರ್ ಸಿಬಿ ಐಪಿಎಲ್ 13 ರಿಂದ ಹೊರಬಿದ್ದ ಮೇಲೆ ಎಲ್ಲರೂ ಭಾವುಕರಾಗಿ ಪರಸ್ಪರ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ಧನಶ್ರೀ ಎಬಿಡಿ ಜತೆಗೆ ಫೋಟೋ ತೆಗೆಸಿಕೊಂಡಿದ್ದಲ್ಲದೆ, ಎಬಿಡಿ ಜತೆಗೆ ಮೊದಲು ಭೇಟಿಯಾದಾಗ ಎಷ್ಟು ನರ್ವಸ್ ಆಗಿದ್ದೆ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಎಬಿಡಿ ಅಪ್ಪಟ ಅಭಿಮಾನಿಯಾಗಿರುವ ಧನಶ್ರೀ ತಮ್ಮಿಬ್ಬರಿಗೆ ಅವರು ನೀಡಿದ ಅಟೋಗ್ರಾಫ್ಡ್ ಜೆರ್ಸಿಯನ್ನು ಪ್ರಕಟಿಸಿದ್ದಾರೆ. ಇದರಲ್ಲಿ ನನ್ನ ಸಹೋದರ ಯುಜಿಗೆ ನಿನ್ನ ಪ್ರೀತಿಯ ಸಹೋದರ ನೀಡಿದ ಉಡುಗೊರೆ ಎಂದು ಬರೆದು ಎಬಿಸಿ ಸಹಿ ಹಾಕಿದ್ದಾರೆ.