Select Your Language

Notifications

webdunia
webdunia
webdunia
webdunia

ರಾಜಕೀಯ ಪ್ರವೇಶಿಸುವುದಿಲ್ಲ: ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟನೆ

ರಾಜಕೀಯ ಪ್ರವೇಶಿಸುವುದಿಲ್ಲ: ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟನೆ
ಚೆನ್ನೈ , ಗುರುವಾರ, 23 ನವೆಂಬರ್ 2017 (17:09 IST)
ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಯಾವುದೇ ಇರಾದೆಯಿಲ್ಲ. ರಾಜಕೀಯ ಪಕ್ಷ ಸ್ಥಾಪಿಸುವಂತೆ ಯಾವುದೇ ಒತ್ತಡವಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. 
 
ಸೂಪರ್ ಸ್ಟಾರ್ ರಜನಿಕಾಂತ್ ಯಾವಾಗ ರಾಜಕೀಯ ಪಕ್ಷ ಆರಂಭಿಸುತ್ತಾರೆ ಎನ್ನುವ ಬಗ್ಗೆ ಕುತೂಹಲವಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸದ್ಯ ರಾಜಕೀಯ ಪ್ರವೇಶಿಸುವ ಇಚ್ಚೆಯಿಲ್ಲ ಎಂದು ತಿಳಿಸಿದ್ದಾರೆ.
 
ಆಂಧ್ರಪ್ರದೇಶದ ಮಂತ್ರಾಲಯಕ್ಕೆ ತೆರಳಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದು ಚೆನ್ನೈಗೆ ಮರಳಿದ ರಜನಿಕಾಂತ್, ಡಿಸೆಂಬರ್ 12 ರಂದು ನನ್ನ ಜನ್ಮದಿನವಾಗಿದ್ದು, ಜನ್ಮದಿನದ ನಂತರ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.  
 
66 ವರ್ಷ ವಯಸ್ಸಿನ ಸ್ಟಾರ್ ನಟ ರಜನಿಕಾಂತ್, ಇತ್ತೀಚೆಗೆ ರಾಜಕೀಯದಲ್ಲಿ ಸೇರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ರಾಜಕೀಯ ಕೆಟ್ಟುಹೋಗಿದ್ದರಿಂದ ಸಮಯ ಬಂದಾಗ "ಯುದ್ಧಕ್ಕೆ ಸಿದ್ಧರಾಗಿ" ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು. 
 
ಅವರ ಸಮಕಾಲೀನ ನಟರಾದ ಕಮಲ್ ಹಾಸನ್ ಕೂಡಾ ಸಂಭಾವ್ಯ ರಾಜಕೀಯ ವೃತ್ತಿಜೀವನದ ಕುರಿತು ಮಾತನಾಡಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸಲು ನಿರ್ಧರಿಸಿದರೆ ಅವರೊಂದಿಗೆ ಕೆಲಸ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂಲಿ ಸಿನೆಮಾದ ಸೆಕ್ಸ್ ವಿಡಿಯೋ ಲೀಕ್: ಹಾಟ್ ನಟಿ ಲಕ್ಷ್ಮಿ ರೈಗೆ ಆಘಾತ( ವಿಡಿಯೋ ನೋಡಿ)