Select Your Language

Notifications

webdunia
webdunia
webdunia
webdunia

ಜ್ಯೂಲಿ ಸಿನೆಮಾದ ಸೆಕ್ಸ್ ವಿಡಿಯೋ ಲೀಕ್: ಹಾಟ್ ನಟಿ ಲಕ್ಷ್ಮಿ ರೈಗೆ ಆಘಾತ( ವಿಡಿಯೋ ನೋಡಿ)

ಜ್ಯೂಲಿ ಸಿನೆಮಾದ ಸೆಕ್ಸ್ ವಿಡಿಯೋ ಲೀಕ್: ಹಾಟ್ ನಟಿ ಲಕ್ಷ್ಮಿ ರೈಗೆ ಆಘಾತ( ವಿಡಿಯೋ ನೋಡಿ)
ಮುಂಬೈ , ಗುರುವಾರ, 23 ನವೆಂಬರ್ 2017 (16:18 IST)
ಜ್ಯೂಲಿ 2 ಚಿತ್ರದಿಂದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿರುವ ಹಾಟ್ ನಟಿ ಲಕ್ಷ್ಮಿರೈಗೆ ಇದು ಅವರ ಸಿನೆಮಾ ಜೀವನದ 50ನೇ ಚಿತ್ರವಾಗಿರುವುದರಿಂದ ಅತ್ಯಂತ ವಿಶೇಷವಾಗಿದೆ. ಜ್ಯೂಲಿ 2 ನಾಳೆ ಬಿಡುಗಡೆಯಾಗುವ ಮುಂಚೆಯೇ ಚಿತ್ರದಲ್ಲಿನ ಸೆಕ್ಸ್ ವಿಡಿಯೋ ಲೀಕ್ ಆಗಿರುವದು ರೈಗೆ ಆಘಾತ ತಂದಿದೆ. 
ಜ್ಯೂಲಿ 2  ಸಿನೆಮಾದಲ್ಲಿರುವ ಕಾಮಪ್ರಚೋದಕ ದೃಶ್ಯಗಳು ಲವ್ ಮೇಕಿಂಗ್ ಸೀನ್‌ಗಳು ಅಂತರ್ಜಾಲದಲ್ಲಿ ಕೋಲಾಹಲ ಸೃಷ್ಟಿಸಿದ್ದವು. ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ರೈ, ಚಿತ್ರ ಬಿಡುಗಡೆ ಮುನ್ನವೇ ಅದರಲ್ಲಿನ ಹಾಟ್ ದೃಶ್ಯಗಳಿರುವ ವಿಡಿಯೋ ಬಹಿರಂಗವಾಗಿರುವುದು ಆಘಾತ ತಂದಿದೆ. ನಮ್ಮ ತಂಡ ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಗುಡುಗಿದ್ದಾರೆ.  
 
ಬಾಲಿವುಡ್ ಲೈಫ್ ಡಾಟ್‌ ಕಾಂ ಪ್ರಕಾರ, ಚಿತ್ರದಲ್ಲಿನ ಮೂರು ದೃಶ್ಯಗಳು ಲೀಕ್ ಆಗಿವೆ. ಒಂದರಲ್ಲಿ ವ್ಯಕ್ತಿಯೊಬ್ಬನೊಂದಿಗೆ ಹಾಟ್ ದೃಶ್ಯದಲ್ಲಿ ತೊಡಗಿರುವುದು, ಎರಡನೇಯದು ಲಿಪ್ ಲಾಕ್, ಮೂರನೇಯದು ಆಕೆಯ ದೇಹದ ಉಬ್ಬು ತಗ್ಗುಗಳನ್ನು ತೋರಿಸುತ್ತಿರುವ ದೃಶ್ಯದ ಸೀನ್‌ಗಳು ಲೀಕ್ ಆಗಿವೆ  
 
ಜ್ಯೂಲಿ 2 ಸಿನೆಮಾ ಚಿತ್ರನಟಿಯೊಬ್ಬಳ ಜೀವನ ಆಧಾರಿತ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ. ನಟಿಯೊಬ್ಬಳು ತಮಿಳು-ತೆಲುಗು ನಟ ಆರ್.ಶರತ್‌ಕುಮಾರ್ ಅವರೊಂದಿಗೆ ಅಫೇರ್ ಹೊಂದಿರುವ ಬಗ್ಗೆ ಸಿನೆಮಾದಲ್ಲಿ ಉಲ್ಲೇಖಿಸಲಾಗಿದೆ.ಬಹುತೇಕ ಬಾಲಿವುಡ್ ನಟಿ ನಗ್ಮಾ ಜೀವನಗಾಥೆಯಾಗಿರಬಹುದು ಎಂದು ಹೇಳಲಾಗುತ್ತಿದೆ. 
 
ದೀಪಕ್ ಶಿವದಾಸಾನಿಯ ನಿರ್ದೇಶನದ ಜೂಲಿ ಚಿತ್ರ 2004 ರಲ್ಲಿ ಬಿಡುಗಡೆಯಾಗಿತ್ತು. ಜ್ಯೂಲಿ ಚಿತ್ರದಲ್ಲಿ ನೇಹಾ ಧೂಪಿಯಾ ನಟಿಸಿದ್ದರು. ಜ್ಯೂಲಿ 2 ಚಿತ್ರದಲ್ಲಿ ಲಕ್ಷ್ಮಿ ರೈ ನಟಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಬೋಲ್ಡ್ ಅವತಾರ