Select Your Language

Notifications

webdunia
webdunia
webdunia
webdunia

ತಮಿಳು ಸಿನಿಮಾದ ಈ ಸೂಪರ್ ಸ್ಟಾರ್ ಗೆ ಹುಡುಗಿ ಬೇಕಾಗಿದೆಯಂತೆ!

ತಮಿಳು ಸಿನಿಮಾದ ಈ ಸೂಪರ್ ಸ್ಟಾರ್ ಗೆ ಹುಡುಗಿ ಬೇಕಾಗಿದೆಯಂತೆ!
ಚೆನ್ನೈ , ಗುರುವಾರ, 23 ನವೆಂಬರ್ 2017 (08:29 IST)
ಚೆನ್ನೈ: ನಟರು ತಮ್ಮ ಬಾಳ ಸಂಗಾತಿ ಆಯ್ಕೆ ಬಗ್ಗೆ ಭಾರೀ ಎಚ್ಚರಿಕೆ ವಹಿಸುತ್ತಾರೆ ನಿಜ. ಆದರೆ ತಮಿಳು ನಟ ಆರ್ಯ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹೆಣ್ಣು ಕೇಳಿಕೊಂಡು ಟ್ವಿಟರ್ ನಲ್ಲಿ ಜಾಹೀರಾತು ನೀಡಿದ್ದಾರೆ.
 

ನಾನು ಮದುವೆಯಾಗಲು ಬಯಸಿದ್ದೇನೆ. ಬಾಳ ಸಂಗಾತಿಯ ಹುಡುಕಾಟದಲ್ಲಿದ್ದೇನೆ. ಮದುವೆ ಬಗ್ಗೆ ಆಸಕ್ತಿಯಿರುವ ಹುಡುಗಿಯರು ಸಂಪರ್ಕಿಸಬಹುದು ಎಂದು ಆರ್ಯ ವಿಡಿಯೋ ಸಂದೇಶ ಹಾಕಿದ್ದಾರೆ. ಆರ್ಯ ಸಂದೇಶಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರತಿಕ್ರಿಯಿಸಿದವರಲ್ಲಿ ನಟಿ ತ್ರಿಷಾ ಕೃಷ್ಣನ್, ರಾಧಿಕಾ ಶರತ್ ಕುಮಾರ್, ಖುಷ್ಬೂ ಮುಂತಾದವರೂ ಇದ್ದಾರೆ. ಆರ್ಯ ಸಂದೇಶ ನೋಡಿ ಇವರೆಲ್ಲಾ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಆದರೆ ಆರ್ಯ ಮಾತ್ರ ನಾನು ಸೀರಿಯಸ್ ಆಗಿ ಹೇಳಿದ್ದು. ಹುಡುಗಿ ಇದ್ದರೆ ಹೇಳಿ ಎಂದಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ನಿವೇದಿತಾ ಕ್ಯಾಪ್ಟನ್ ಆಗಿದ್ದಕ್ಕೆ ಚಂದ್ರು ಕಾರಣವಂತೆ!