Publish Date: Tue, 21 Mar 2017 (08:52 IST)
Updated Date: Tue, 21 Mar 2017 (08:57 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಳಿಯ ಧನುಷ್ ತಮ್ಮ ಪುತ್ರನೆಂದು ಮಧುರೈ ಮೂಲದ ದಂಪತಿ ಮಾಡುತ್ತಿದ್ದ ವಾದಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ತಮಿಳು ಚಿತ್ರ ನಟ ಧನುಷ್ ಸದ್ಯಕ್ಕೆ ನಿರಾಳರಾಗಿದ್ದಾರೆ.
ಮಧುರೈ ಮೂಲದ ಕದಿರೇಶನ್ ದಂಪತಿ ಧನುಷ್ ತಮ್ಮ ಪುತ್ರ ಚಿಕ್ಕವನಿದ್ದಾಗ ಮನೆ ಬಿಟ್ಟು ಹೋಗಿದ್ದ. ಚಿತ್ರರಂಗಕ್ಕೆ ಬಂದ ಮೇಲೆ ನಮ್ಮನ್ನು ಮರೆತಿದ್ದಾನೆ. ಅವನಿಂದ ಜೀವನಾಂಶ ಕೊಡಿಸಿ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಧನುಷ್ ಈ ವಾದವನ್ನು ಒಪ್ಪಿರಲಿಲ್ಲ.
ನ್ಯಾಯಾಲಯ ಕದಿರೇಶನ್ ದಂಪತಿ ಹೇಳಿದ ಮಚ್ಚೆ ಗುರುತು ಧನುಷ್ ದೇಹದಲ್ಲಿದೆಯೇ ಎಂದು ಪರೀಕ್ಷಿಸಲು ಆದೇಶಿಸಿದ್ದರು. ಆದರೆ ಕದಿರೇಶನ್ ದಂಪತಿ ಹೇಳಿದ ಮಚ್ಚೆ ಗುರುತು ಧನುಷ್ ದೇಹದ ಮೇಲಿರಲಿಲ್ಲ ಎಂದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಕದಿರೇಶನ್ ದಂಪತಿಗೆ ಹಿನ್ನಡೆಯಾಗಿದೆ. ಧನುಷ್ ಸದ್ಯಕ್ಕೆ ನಿರಾಳರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ