Select Your Language

Notifications

webdunia
webdunia
webdunia
webdunia

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮಧುರೈ ದಂಪತಿ ನ್ಯಾಯಾಲಯಕ್ಕೆ ದೂರು

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮಧುರೈ ದಂಪತಿ ನ್ಯಾಯಾಲಯಕ್ಕೆ ದೂರು
ಮಧುರೈ , ಶನಿವಾರ, 26 ನವೆಂಬರ್ 2016 (09:27 IST)
ಮಧುರೈ: ತಮಿಳು ಚಿತ್ರ ನಟ, ರಜನೀಕಾಂತ್ ಅಳಿಯ ಧನುಷ್ ತಮ್ಮ ಪುತ್ರ,ಆತನನ್ನು ನಮಗೆ ಮರಳಿಸಿ ಎಂದು ಮಧುರೈಯ ದಂಪತಿಯೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಇದುವರೆಗೆ ಧನುಷ್ ಚಿತ್ರ ನಿರ್ದೇಶಕ ಕಸ್ತೂರಿ ರಾಜನ್ ಅವರೆಂದೇ ಹೇಳಲಾಗಿತ್ತು. ಇದೀಗ ಧನುಷ್ ಪೋಷಕರ ಬಗ್ಗೆ ವಿವಾದವೆದ್ದಿದೆ.

ಮಧುರೈ ನಿವಾಸಿಗಳಾದ ಕದಿರೇಷನ್ ಮತ್ತು ಮೀನಾಕ್ಷಿ ಎಂಬ ವೃದ್ಧ ದಂಪತಿ ನ್ಯಾಯಾಲಯಕ್ಕೆ ದೂರು ನೀಡಿದವರು. ಅವರು ಹೇಳುವ ಪ್ರಕಾರ, ಧನುಷ್ ಅವರ ಮೂವರು ಪತ್ರರಲ್ಲಿ ಒಬ್ಬರಂತೆ. ಧನುಷ್ ಮಧುರೈಯ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದರು ಎಂಬುದು ಅವರ ವಾದ.

ಧನುಷ್ ಜನ್ಮ ನಾಮ ಕಲೈಸೆಲ್ವಂ ಅಂತೆ. ಎಸ್ಎಸ್ಎಲ್ ಸಿ ಓದಿದ ನಂತರ ಧನುಷ್ ಪ್ಲಸ್ ಒನ್ ತರಗತಿಗೆ ಖಾಸಗಿ ಶಾಲೆಯೊಂದರಲ್ಲಿ ಸೇರಿದ್ದರಂತೆ. ಆದರೆ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿ ಕಸ್ತೂರಿ ರಾಜನ್ ಜತೆ ಸೇರಿಕೊಂಡರು ಎನ್ನುವುದು ದಂಪತಿಗಳು ಹೇಳುವ ವಾದ.

ನಂತರ ಕಸ್ತೂರಿ ರಾಜನ್ ನಿವಾಸಕ್ಕೆ ಧನುಷ್ ರನ್ನು ನೋಡಲು ಬಂದರೆ ಅವರು ಅವಕಾಶ ನೀಡುತ್ತಿರಲಿಲ್ಲ ಎಂದು ಕದಿರೇಷನ್ ದಂಪತಿ ಆರೋಪಿಸಿದ್ದಾರೆ. ಅಲ್ಲದೆ ತಮಗೆ ಇನ್ನಿಬ್ಬರು ಪುತ್ರರಿದ್ದರೂ, ಅವರು ಆರ್ಥಿಕವಾಗಿ ಅಸಮರ್ಥರಾಗಿರುವ ಹಿನ್ನಲೆಯಲ್ಲಿ ಧನುಷ್ ರಿಂದ ನಮ್ಮ ಜೀವನ ನಿರ್ವಹಣೆಗೆ 65 ಸಾವಿರ ತಿಂಗಳ ಮಸಾಶನ ಒದಗಿಸಿ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ ಧನುಷ್ ಗೆ ಜನವರಿ 22 ರಂದು ಹಾಜರಾಗಲು ಸೂಚನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರವಿಚಂದ್ರನ್ ಅಭಿನಯದ ಅಂಜದ ಗಂಡು ಸಿನಿಮಾ ರಿ ರಿಲೀಸ್ ಆಗಲಿದೆಯಂತೆ!