Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಅಭಿನಯದ ಅಂಜದ ಗಂಡು ಸಿನಿಮಾ ರಿ ರಿಲೀಸ್ ಆಗಲಿದೆಯಂತೆ!

ರವಿಚಂದ್ರನ್ ಅಭಿನಯದ ಅಂಜದ ಗಂಡು ಸಿನಿಮಾ ರಿ ರಿಲೀಸ್ ಆಗಲಿದೆಯಂತೆ!
Bangalore , ಶನಿವಾರ, 26 ನವೆಂಬರ್ 2016 (08:42 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಒಂದು ಖುಷಿಯ ಸಂಗತಿ.  1998 ರಲ್ಇ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಅಂಜದ ಗಂಡು ಸಿನಿಮಾ ಮತ್ತೊಮ್ಮೆ ರಿಲೀಸ್ ಆಗಲಿದೆಯಂತೆ. ಡಿಸೆಂಬರ್ 2 ರಿಂದ ಮತ್ತೆ ಹಿರಿ ಪರದೆ ಮೇಲೆ ಖುಷ್ಬೂ ಮತ್ತು ರವಿಚಂದ್ರನ್ ಜೋಡಿ ಮೋಡಿ ಮಾಡಲಿದ್ದಾರೆ.

ರಂಬಾ ಬೇಡ ಜಂಬಾ ಹಾಡಿನಿಂದ ಹಿಡಿದು ತ್ರಿಪುರ ಸುಂದರಿ ಹಾಡಿನವರೆಗೆ ಪ್ರತಿಯೊಂದು ಹಾಡು ಕೂಡಾ ಇಂದಿಗೂ ಯುವ ಜನತೆಗೆ ಅಚ್ಚು ಮೆಚ್ಚು. ನಾಯಕಿಯ ಕೊಬ್ಬು ಮುರಿಯುವ ಹೈದನಾಗಿ ರವಿಚಂದ್ರನ್ ಪಾತ್ರ ಯಾರೂ ಮರೆಯುವಂತಿಲ್ಲ.

ಚಿತ್ರವನ್ನು ರಿ ರಿಲೀಸ್ ಮಾಡಲು ನಿರ್ಧರಿಸಿರುವುದಾಗಿ ಸ್ವತಃ ನಿರ್ಮಾಪಕ ಬಿ.ಎನ್. ಗಂಗಾಧರ್ ಹೇಳಿದ್ದಾರೆ. ಹಲವಾರು ಬಾರಿ ಸಿನಿಮಾ ಟಿವಿಯಲ್ಲಿ ಬಂದರೂ ಥಿಯೇಟರ್ ನಲ್ಲಿ ಜನ ನೋಡುತ್ತಾರೆಂಬ ವಿಶ್ವಾಸ ಅವರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತಿನ ಅತೀ ಸುಂದರ ಮೊಗದವರಲ್ಲಿ ಹೃತಿಕ್ ರೋಷನ್ ನಂ.3!