ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಗೆ ಇಂದು 73 ನೇ ಹುಟ್ಟುಹಬ್ಬದ ಸಂಭ್ರಮ. ಕನ್ನಡ ನಾಡಿನಿಂದ ತಮಿಳಿಗೆ ಹೋಗಿ ಕೊನೆಗೆ ವಿಶ್ವವೇ ಭಾರತೀಯ ಚಿತ್ರರಂಗದತ್ತ ನೋಡುವಂತೆ ಮಾಡಿದ ತಲೈವಾ ಜನ್ಮದಿನಕ್ಕೆ ಶುಭಾಶಯಗಳೇ ಹರಿದುಬರುತ್ತಿದೆ.
73 ರ ಇಳಿವಯಸ್ಸಿನಲ್ಲೂ ಯುವಕರೂ ನಾಚುವಂತೆ ಫೈಟ್, ಡ್ಯಾನ್ಸ್ ಮಾಡಿ ಪರದೆ ಮೇಲೆ ನಾಯಕನಾಗಿ ಮಿಂಚುವ ರಜನಿ ಜನಿಸಿದ್ದು 1950 ರಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ. ಹೀಗಾಗಿ ಮೂಲತಃ ಅವರು ಕನ್ನಡಿಗರೇ.
ಕರ್ನಾಟಕದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ನಟನೆಯಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಹೀಗಾಗಿ ಚೆನ್ನೈಗೆ ಶಿಫ್ಟ್ ಆದರು. ಮೊದಲ ಬಾರಿಗೆ ಅಪೂರ್ವ ರಾಗಂಗಳ್ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಅದರ ಮರು ವರ್ಷ ಕನ್ನಡದಲ್ಲಿ ಕಥಾ ಸಂಗಮ ಸಿನಿಮಾದಲ್ಲಿ ಅಭಿನಯಿಸಿದರು.
ತಮ್ಮದೇ ವಿಶಿಷ್ಟ ಮ್ಯಾನರಿಸಂ, ಫ್ಯಾನ್ಸ್ ಬೇಸ್ ನಿಂದ ಬಾಲಿವುಡ್ ನ ಘಟಾನುಘಟಿ ನಾಯಕರುಗಳಿಗೇ ರಜನಿ ನಡುಕ ಹುಟ್ಟಿಸಿದರು. ಅವರ ಫ್ಯಾನ್ ಬೇಸ್ ಮುಂದೆ ಬಾಲಿವುಡ್ ಕೂಡಾ ಮಂಡಿಯೂರಿ ಕುಳಿತಿತ್ತು. ದಕ್ಷಿಣ ಭಾರತದ ನಟರನ್ನು ಕಡೆಗಣಿಸುತ್ತಿದ್ದಾಗ ರಜನಿ ತಮ್ಮದೇ ಸ್ಥಾನ ಕಂಡುಕೊಂಡು ಸೂಪರ್ ಸ್ಟಾರ್ ಆಗಿ ಮೆರೆದವರು. ಅವರ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದಲೂ ಒಂದು ಹ್ಯಾಪೀ ಬರ್ತ್ ಡೇ.