Select Your Language

Notifications

webdunia
webdunia
webdunia
webdunia

ತಲೈವಾ ರಜನೀಕಾಂತ್ ಪತ್ನಿಗೆ ವಂಚನೆ ಕೇಸ್ ಸಂಕಷ್ಟ

ತಲೈವಾ ರಜನೀಕಾಂತ್ ಪತ್ನಿಗೆ ವಂಚನೆ ಕೇಸ್ ಸಂಕಷ್ಟ
ಚೆನ್ನೈ , ಮಂಗಳವಾರ, 5 ಡಿಸೆಂಬರ್ 2023 (17:35 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪತ್ನಿ ಲತಾ ಅವರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.

2024 ರ ಜನವರಿ 6 ರೊಳಗಾಗಿ ಬೆಂಗಳೂರಿನ ಕೋರ್ಟಿಗೆ ಖುದ್ದಾಗಿ ಹಾಜರಾಗಲು ನೋಟಿಸ್ ನೀಡಲಾಗಿದೆ. ಇದು ಜಾಮೀನುರಹಿತ ಪ್ರಕರಣವಾದ್ದರಿಂದ ಅವರೇ ಹಾಜರಾಗಬೇಕಿದೆ.

ರಜನಿ ಪುತ್ರಿ ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಸಿನಿಮಾ ಬಿಡುಗಡೆ ಸಂದರ್ಭ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಶ್ಯೂರಿಟಿ ನೀಡಿದ್ದರು. ಆದರೆ ಸಿನಿಮಾ ಲಾಸ್ ಆದಾಗ ನಷ್ಟ ತುಂಬಿಕೊಡಲು ಲತಾ ವಿಫಲರಾಗಿದ್ದಾರೆ ಎಂದು ಅವರ ವಿರುದ್ಧ ಕೇಸ್ ದಾಖಲಾಗಿತ್ತು.

ಈ ಸಂಬಂಧ 2015 ರಲ್ಲಿ ಎಫ್ ಐಆರ್ ದಾಖಲಾಗಿತ್ತು. ಈಗ ಲತಾ ಅವರೇ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಇದನ್ನು ಅವರು ಪಾಲಿಸಲೇಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಪಾಕಿಸ್ತಾನದಲ್ಲಿದೆಯಾ? ರಿಷಬ್, ರಕ್ಷಿತ್ ಕುರಿತ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಖಡಕ್ ಉತ್ತರ