ಲಾಲ್ ಸಲಾಂ ಸಿನಿಮಾಗೆ ಪ್ರತೀ ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆದ ತಲೈವಾ ರಜನಿ

Krishnaveni K
ಗುರುವಾರ, 8 ಫೆಬ್ರವರಿ 2024 (09:43 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಪುತ್ರಿ ಐಶ್ವರ್ಯಾ ನಿರ್ದೇಶಿಸಿರುವ ಲಾಲ್ ಸಲಾಂ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅವರು ಈ ಪಾತ್ರಕ್ಕಾಗಿ ತೆಗೆದುಕೊಂಡಿರುವ ಸಂಭಾವನೆ ಈಗ ಎಲ್ಲರ ಹುಬ್ಬೇರಿಸುವಂತಿದೆ. ರಜನಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದೇ ಒಟ್ಟಾರೆಯಾಗಿ 40 ನಿಮಿಷಗಳು ಮಾತ್ರ. ಈ 40 ನಿಮಿಷದ ಪಾತ್ರಕ್ಕೆ ಅವರು ಬರೋಬ್ಬರಿ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಅಂದರೆ ಪ್ರತೀ ನಿಮಿಷಕ್ಕೆ 1 ಕೋಟಿಯಂತಿದೆ ಅವರ ಸಂಭಾವನೆ!

ಫೆ.9 ರಂದು ಲಾಲ್ ಸಲಾಂ ರಿಲೀಸ್
ರಜನಿ ಜೊತೆಗೆ ವಿಷ್ಣು ವಿಶಾಲ್, ವಿಕ್ರಾಂತ್ ಮುಂತಾದವರು ಲಾಲ್ ಸಲಾಂ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಫೆಬ್ರವರಿ 9 ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಮೂಲಗಳ ಪ್ರಕಾರ ರಜನಿ ಈ ಪಾತ್ರದಲ್ಲಿ ಮೊಯಿದ್ದೀನ್ ಭಾಯ್ ಎನ್ನುವ ಪಾತ್ರ ಮಾಡಿದ್ದಾರೆ. ರಜನಿ ಪಾತ್ರಕ್ಕೆ ಚಿತ್ರಕ್ಕೆ ಟ್ವಿಸ್ಟ್ ನೀಡುತ್ತದಂತೆ. ಕೇವಲ ಹಾಗೆ ಬಂದು ಹೀಗೆ ಹೋಗುವ ಪಾತ್ರ ಇದಲ್ಲ. ಅದೇ ಕಾರಣಕ್ಕೆ ರಜನಿ ಈ ಪಾತ್ರವನ್ನು ಒಪ್ಪಿಕೊಂಡಿದ್ದರು. ಒಟ್ಟಾರೆಯಾಗಿ ಹಿಂದೂ-ಮುಸ್ಲಿಂ ಭಾವೈಕತ್ಯತೆಯನ್ನು ಸಾರುವ ಕತೆ ಚಿತ್ರದಲ್ಲಿದೆ.

ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಚಿತ್ರಕ್ಕೆ ಬಂಡವಾಳ ಹಾಕಿದೆ. ಸಿನಿಮಾದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳ ಸಿನಿಮಾವದರೂ ತಮ್ಮ ಸಂಭಾವನೆ ವಿಚಾರದಲ್ಲಿ ರಜನಿ ಬಿಲ್ ಕುಲ್ ರಾಜಿ ಮಾಡಿಕೊಂಡಿಲ್ಲ. ಹಲವು ವರ್ಷಗಳ ನಂತರ ಐಶ್ವರ್ಯಾ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಅ‍ಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಪಂಜಾಬಿ ಗಾಯಕ ರಾಜವೀರ್ ಜವಾಂಡ ನಿಧನ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ಮುಂದಿನ ಸುದ್ದಿ
Show comments