Select Your Language

Notifications

webdunia
webdunia
webdunia
webdunia

ತಂದೆ ರಜನೀಕಾಂತ್ ಪರವಾಗಿ ಪುತ್ರಿ ಐಶ್ವರ್ಯಾ ಬ್ಯಾಟಿಂಗ್

Rajinikanth
ಚೆನ್ನೈ: ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದ ಸೂಪರ್ ಸ್ಟಾರ್ ರಜನೀಕಾಂತ್ ರನ್ನು ಸಂಘಿ ಎಂದು ಟೀಕಿಸಿದ್ದವರಿಗೆ ಪುತ್ರಿ ಐಶ್ವರ್ಯಾ ತಿರುಗೇಟು ನೀಡಿದ್ದಾರೆ.

ಲಾಲ್ ಸಲಾಂ ಅಡಿಯೋ ಲಾಂಚ್ ವೇಳೆ ತಂದೆಯ ಬಗ್ಗೆ ಮಾತನಾಡುತ್ತಾ ಐಶ್ವರ್ಯಾ ಭಾವುಕರಾದರು. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಿದ್ದಕ್ಕೆ ನಮ್ಮ ತಂದೆಯನ್ನು ಕೆಲವರು ಸಂಘಿ ಎನ್ನುತ್ತಿದ್ದಾರೆ. ಆದರೆ ನನ್ನ ತಂದೆ ಸಂಘಿ ಅಲ್ಲ ಎಂದಿದ್ದಾರೆ.

‘ನನ್ನ ತಂದೆಯವರು ಸಂಘಿ ಆಗಿದ್ದರೆ ಲಾಲ್ ಸಲಾಂ ರೀತಿಯ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಒಬ್ಬ ಸಂಘಿ ವ್ಯಕ್ತಿ ಇಂತಹ ಸಿನಿಮಾದಲ್ಲಿ ನಟಿಸಲ್ಲ. ಯಾಕೆ ಎಂದು ನಿಮಗೆ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ನಟಿಸಲು ಧೈರ್ಯ ಬೇಕು. ಅಂತಹವರಲ್ಲಿ ನನ್ನ ತಂದೆ ಕೂಡಾ ಒಬ್ಬರು’ ಎಂದಿದ್ದಾರೆ ಐಶ್ವರ್ಯಾ.

ಲಾಲ್ ಸಲಾಂ ಸಿನಿಮಾದ ಪೋಸ್ಟರ್ ಒಂದನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಆ ಪೋಸ್ಟ್ ನಲ್ಲಿ ರಜನೀ ಮುಸ್ಲಿಂ ವ್ಯಕ್ತಿಯ ಪೋಷಾಕಿನಲ್ಲಿದ್ದರು. ಹೀಗಾಗಿ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು. ರಜನಿ ಅಯೋಧ‍್ಯೆಗೆ ಭೇಟಿ ನೀಡಿದ್ದಕ್ಕೆ ಕಬಾಲಿ ನಿರ್ದೇಶಕ ಪಾ ರಂಜಿತ್  ಕೂಡಾ ಟೀಕೆ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

3 ದಿನದಲ್ಲಿ 100 ಕೋಟಿ ಕಮಾಯಿ ಮಾಡಿದ ಫೈಟರ್