ಚೆನ್ನೈ: ಭಾರತೀಯ ಚಿತ್ರರಂಗದ ದೊರೆ ತಲೈವರ್ ಎಂದೇ ಕರೆಯಿಸಿಕೊಳ್ಳುವ ಸೂಪರ್ ಸ್ಟಾರ್ ರಜನೀಕಾಂತ್ ಗೆ ಇಂದು 73 ನೇ ಜನ್ಮದಿನದ ಸಂಭ್ರಮ.
ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ, ಸಿನಿ ಸ್ನೇಹಿತರಿಂದ ಶುಭಾಶಯಗಳ ಸುರಿಮಳೆಯೇ ಕಂಡುಬರುತ್ತಿದೆ. ರಜನಿ ಅಭಿಮಾನಿಗಳ ಪಾಲಿಗೆ ಪ್ರೀತಿಯ ತಲೈವಾ. ಸೂಪರ್ ಸ್ಟಾರ್ ಎಂದರೆ ಮೊದಲು ಬರುವುದೇ ರಜನಿ ಹೆಸರು.
ಹಾಗಿದ್ದರೆ ಅವರಿಗೆ ಸೂಪರ್ ಸ್ಟಾರ್ ಎಂಬ ಬಿರುದು ಕೊಟ್ಟವರು ಯಾರು? ಯಾವಾಗಿನಿಂದ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತಿತ್ತು ಎನ್ನುವುದಕ್ಕೆ ವಿಶೇಷ ಹಿನ್ನಲೆಯಿದೆ. ಅದೇನು ಎಂದು ನೋಡೋಣ.
1978 ರಲ್ಲಿ ರಜನಿ ಬೈರವಿ ಎನ್ನುವ ತಮಿಳು ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದರು. ಈ ಸಿನಿಮಾ ಅವರು ಏಕಾಂಗಿ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ. ಎಂ. ಭಾಸ್ಕರ್ ಈ ಸಿನಿಮಾದ ನಿರ್ದೇಶಕರು. ವಿತರಕರಾಗಿದ್ದ ಕಲೈಪುಳಿ ಎಸ್. ತನು ಎಂಬವರು ರಜನಿಕಾಂತ್ ಅವರ 35 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದಲ್ಲದೆ, ಸೂಪರ್ ಸ್ಟಾರ್ ಎಂಬ ಬಿರುದು ಕೊಟ್ಟರು ಎನ್ನಲಾಗಿದೆ. ಬೈರವಿ ಸಿನಿಮಾದ ನಂತರ ಅವರ ಎಲ್ಲಾ ಸಿನಿಮಾಗಳ ಟೈಟಲ್ ಕಾರ್ಡ್ ನಲ್ಲಿ ಸೂಪರ್ ಸ್ಟಾರ್ ಎಂಬ ಬಿರುದು ಸೇರಿಕೊಂಡಿತು.