ಟಾಕ್ಸಿಕ್ ಸಿನಿಮಾ ಬಗ್ಗೆ ಇದೇ ತಿಂಗಳ ಕೊನೆಯಲ್ಲಿ ಸಿಗಲಿದೆ ಅಪ್ ಡೇಟ್

Krishnaveni K
ಗುರುವಾರ, 8 ಫೆಬ್ರವರಿ 2024 (08:40 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾ ಬಗ್ಗೆ ಇದೇ ತಿಂಗಳ ಅಂತ್ಯಕ್ಕೆ ಹೊಸ ಅಪ್ ಡೇಟ್ ಸಿಗುವ ಸಾಧ‍್ಯತೆಯಿದೆ.

ಚಿತ್ರತಂಡ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಇನ್ನೂ ಅಧಿಕೃತವಾಗಿ ಶೂಟಿಂಗ್ ಶುರು ಮಾಡಿಲ್ಲ. ಈಗಾಗಲೇ ಪಾತ್ರಗಳ ಆಯ್ಕೆ ನಡೆಯುತ್ತಿದೆ ಎಂಬ ಮಾಹಿತಿಯಿದೆ. ಯಶ್ ಈಗಾಗಲೇ ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇತ್ತೀಚೆಗೆ ಅವರ ಹುಟ್ಟುಹಬ್ಬದಂದು ಟಾಕ್ಸಿಕ್ ಸಿನಿಮಾ ಸಲುವಾಗಿಯೇ ಮಲೇಷ್ಯಾದಲ್ಲಿದ್ದರು. ಆದರೆ ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಭಾರತಕ್ಕೆ ಬಂದಿದ್ದರು. ಇದೀಗ ಲೊಕೇಷನ್ ಆಯ್ಕೆ ಕೆಲಸಗಳೆಲ್ಲಾ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ  ಇದೇ ತಿಂಗಳ ಅಂತ್ಯಕ್ಕೆ ಟಾಕ್ಸಿಕ್ ಸಿನಿಮಾ ಮುಹೂರ್ತ ನಡೆದು ಶೂಟಿಂಗ್ ಆರಂಭವಾಗುವ ಸಾ‍ಧ‍್ಯತೆಯಿದೆ.

ಮೂಲಗಳ ಪ್ರಕಾರ ಟಾಕ್ಸಿಕ್ ಸಿನಿಮಾವನ್ನು ಶ್ರೀಲಂಕಾ, ಲಂಡನ್, ಮಲೇಷ್ಯಾ, ಗೋವಾದಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ ಯಶ್ ಮತ್ತು ಚಿತ್ರತಂಡ ಈ ಎಲ್ಲಾ ಸ್ಥಳಗಳಿಗೆ ತೆರಳಿ ಶೂಟಿಂಗ್ ಗೆ ತಯಾರಿ ಮಾಡಿಕೊಂಡು ಬಂದಿದೆ. ಹೀಗಾಗಿ ಟಾಕ್ಸಿಕ್ ದೊಡ್ಡ ಮಟ್ಟದಲ್ಲೇ ಲಾಂಚ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಕಾಮಿಡಿ ಕಿಲಾಡಿಗಳು ಪ್ರೋಮೋ ನೋಡಿದ ನೆಟ್ಟಿಗರು ಗರಂ ಆಗಿದ್ಯಾಕೆ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ಮುಂದಿನ ಸುದ್ದಿ
Show comments