Publish Date: Wed, 06 May 2020 (09:37 IST)
Updated Date: Wed, 06 May 2020 (09:38 IST)
ಬೆಂಗಳೂರು: ಲಾಕ್ ಡೌನ್ ವೇಳೆ ಪತ್ನಿ ಪಾತ್ರೆ ತೊಳೆಯುವ ಕೆಲಸ ಕೊಟ್ಟಿದ್ದಾಳೆ ಎಂದು ಫೋಟೋ ಹಾಕಿ ಸುದ್ದಿಯಾಗಿದ್ದ ನಟ ಶ್ರೀ ಮುರಳಿ ಈಗ ತಾವು ಹೇಗೆ ಟೈಮ್ ಪಾಸ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಲಾಕ್ ಡೌನ್ ವೇಳೆ ಮಕ್ಕಳ ಜತೆ ಭರ್ಜರಿ ಟೈಮ್ ಪಾಸ್ ಮಾಡುತ್ತಿರುವ ಶ್ರೀಮುರಳಿ ವಿಡಿಯೋ ಈಗ ಸಾಮಾಜಿಕ ಜಾಲತಾಣ ಪುಟದಲ್ಲಿ ವೈರಲ್ ಆಗಿದೆ.
ಮೊನ್ನೆಯಷ್ಟೇ ಮಕ್ಕಳ ಜತೆ ಪೈಂಟಿಂಗ್ ಮಾಡುತ್ತಿರುವ ಫೋಟೋವನ್ನು ಶ್ರೀಮುರಳಿ ಪ್ರಕಟಿಸಿದ್ದರು. ಇದೀಗ ಅವರ ಪತ್ನಿ ವಿದ್ಯಾ ತಾವೂ ಮಗುವಾಗಿ ಮಕ್ಕಳ ಜತೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ಶ್ರೀ ಮುರಳಿಯ ತುಂಟಾಟದ ವಿಡಿಯೋ ಪ್ರಕಟಿಸಿದ್ದಾರೆ. ಈ ಮೂಲಕ ಲಾಕ್ ಡೌನ್ ಸಮಯವನ್ನು ತಮ್ಮ ಕುಟುಂಬದ ಜತೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಶ್ರೀಮುರಳಿ.