Publish Date: Tue, 05 May 2020 (09:14 IST)
Updated Date: Tue, 05 May 2020 (09:15 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಡದಿ, ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎಂದರೆ ಇಷ್ಟಪಡದವರು ಯಾರೂ ಇಲ್ಲ.
ಮೃದು ಮನಸ್ಸಿನ, ಮಾತಿನ ಅಭಿಮಾನಿಗಳನ್ನು ಗೌರವದಿಂದ ಕಾಣುವ ನಟಿ ರಾಧಿಕಾ ಪಂಡಿತ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪಕ್ಕಾ ಕನ್ನಡ ಹುಡುಗಿ ರಾಧಿಕಾ ಬಗ್ಗೆ ಹೀಗೊಂದು ಸತ್ಯ ನಿಮಗೆ ಗೊತ್ತಾ?
ಅಭಿಮಾನಿಗಳು ಯಾರೇ ಅಟೋಗ್ರಾಫ್ ಕೇಳಿದರೂ ರಾಧಿಕಾ ನಿರಾಶೆ ಮಾಡುವುದಿಲ್ಲ. ಇಂತಿಪ್ಪ ರಾಧಿಕಾ ಅಟೋಗ್ರಾಫ್ ಕೊಡುವಾಗಲೆಲ್ಲಾ ಪಕ್ಕಾ ಕನ್ನಡದಲ್ಲೇ ತಮ್ಮ ಸಹಿ ಹಾಕುತ್ತಾರೆ. ಅವರು ಹೆಚ್ಚಾಗಿ ಇಂತಿ ನಿಮ್ಮ ಪ್ರೀತಿಯ ರಾಧಿಕಾ ಪಂಡಿತ್ ಎಂದು ಕನ್ನಡದಲ್ಲೇ ಆಟೋಗ್ರಾಫ್ ಕೊಡುತ್ತಾರೆ. ಇದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿ.