Publish Date: Sat, 02 May 2020 (10:21 IST)
Updated Date: Sat, 02 May 2020 (10:22 IST)
ಬೆಂಗಳೂರು: ಸದ್ಯಕ್ಕೆ ಲಾಕ್ ಡೌನ್ ನಿಂದಾಗಿ ಎಲ್ಲೂ ಚಿತ್ರೀಕರಣ ನಡೆಯುತ್ತಿಲ್ಲ. ಆದರೆ ರೆಮೋ ಚಿತ್ರತಂಡ ತಮ್ಮ ಚಿತ್ರಕ್ಕಾಗಿ ಕಾಶ್ಮೀರವನ್ನೇ ಮರು ಸೃಷ್ಟಿ ಮಾಡಲಿದೆಯಂತೆ!
ಒಂದು ವೇಳೆ ಲಾಕ್ ಡೌನ್ ಮುಗಿದರೂ ಸದ್ಯಕ್ಕೆ ಹೊರಾವರಣದಲ್ಲಿ ಚಿತ್ರೀಕರಣ ನಡೆಸುವುದು ಕಷ್ಟ. ಹೀಗಾಗಿ ನಿರ್ದೇಶಕ ಪವನ್ ಒಡೆಯರ್ ತಮ್ಮ ನಿರ್ದೇಶನದಲ್ಲಿ ಪವನ್ ಒಡೆಯರ್ ಸಿನಿಮಾಗಾಗಿ ಕಾಶ್ಮೀರವನ್ನು ಗ್ರಾಫಿಕ್ಸ್ ನಲ್ಲೇ ಸೃಷ್ಟಿ ಮಾಡಲಿದ್ದಾರಂತೆ.
ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಮತ್ತು ಇಶಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಾಕ್ ಡೌನ್ ಬಳಿಕ ಬಿಡುಗಡೆಯಾಗಲಿರುವ ಸಿನಿಮಾಗಳಲ್ಲಿ ಇದೂ ಒಂದಾಗಿದೆ.