ತಂದೆ ರಿಷಿ ಕಪೂರ್ ಗೆ ಕೊನೆಯ ಗುಡ್ ಬೈ ಹೇಳಿದ ರಣಬೀರ್ ಕಪೂರ್

ಸೋಮವಾರ, 4 ಮೇ 2020 (09:40 IST)
ಮುಂಬೈ: ಮೊನ್ನೆಯಷ್ಟೇ ನಿಧನರಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನೆರವೇರಿದ್ದು, ಕುಟುಂಬಸ್ಥರು ಭಾಗಿಯಾಗಿದ್ದಾರೆ.


ಪತ್ನಿ ನೀತು ಕಪೂರ್, ಪುತ್ರಿ ರಿಧಿಮಾ ಕಪೂರ್, ಪುತ್ರ ರಣಬೀರ್ ಕಪೂರ್, ಗೆಳತಿ ಅಲಿಯಾ ಭಟ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಂಬೈನ ಬಂಗಂಗಾದಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನೆರವೇರಿಸಲಾಗಿದೆ.

ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮಾಡಬೇಕೆಂದು ಕುಟುಂಬಸ್ಥರ ಆಸೆಯಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಅಧಿಕಾರಿಗಳು ಅನುಮತಿ ನೀಡದ ಕಾರಣ ಮುಂಬೈನಲ್ಲೇ ಅಸ್ಥಿ ವಿಸರ್ಜಿಸಿರುವುದಾಗಿ ರಣಬೀರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಜಿಎಫ್ 2 ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಕಸರತ್ತು ನಡೆಸುತ್ತಿರುವ ಸಂಜಯ್ ದತ್