Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಕಸರತ್ತು ನಡೆಸುತ್ತಿರುವ ಸಂಜಯ್ ದತ್

ಕೆಜಿಎಫ್ 2 ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಕಸರತ್ತು ನಡೆಸುತ್ತಿರುವ ಸಂಜಯ್ ದತ್
ಬೆಂಗಳೂರು , ಸೋಮವಾರ, 4 ಮೇ 2020 (09:31 IST)
ಬೆಂಗಳೂರು: ಬಾಲಿವುಡ್ ನಟ ಸಂಜಯ್ ದತ್ ಕನ್ನಡದ ಕೆಜಿಎಫ್ 2 ಸಿನಿಮಾದಲ್ಲಿ ಅಧೀರ ಪಾತ್ರದಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.


ಈ ಮೂಲಕ ಸಂಜಯ್ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಮೂಲವಾದರೂ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ತನ್ನದೇ ಕ್ರೇಜ್ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ.

ಕ್ಲೈಮ್ಯಾಕ್ಸ್ ನಲ್ಲಿ ಯಶ್ ಹಾಗೂ ಸಂಜಯ್ ದತ್ ಬರಿಮೈಯಲ್ಲಿ ಫೈಟ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ದೃಶ್ಯಕ್ಕಾಗಿ ಸಂಜಯ್ ದತ್ ತೂಕ ಇಳಿಸಲು ದೈಹಿಕ ಕಸರತ್ತು ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಲಾಕ್ ಡೌನ್ ಮುಗಿದ ಕೂಡಲೇ ಈ ಭಾಗದ ಚಿತ್ರೀಕರಣ ನಡೆಯುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಿರ್ದೇಶಕ ರಾಜಮೌಳಿ ‘ರಾಮಾಯಣ’ ಮಾಡಬೇಕಂತೆ! ಅಭಿಮಾನಿಗಳ ಹೊಸ ಬೇಡಿಕೆ