Publish Date: Mon, 04 May 2020 (09:13 IST)
Updated Date: Mon, 04 May 2020 (09:14 IST)
ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಧಾರವಾಹಿ ಮರುಪ್ರಸಾರ ಮುಕ್ತಾಯವಾಗುತ್ತಿದ್ದಂತೇ ಟ್ವಿಟರ್ ನಲ್ಲಿ ಅಭಿಮಾನಿಗಳು ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿಗೆ ಹೊಸ ಬೇಡಿಕೆಯಿಟ್ಟಿದ್ದಾರೆ.
ರಾಮಾಯಣ ಧಾರವಾಹಿ ಮುಗಿಯತಲ್ಲಾ ಎಂಬ ಬೇಸರದಲ್ಲಿರುವ ಟ್ವಿಟರಿಗರು ರಮಾನಂದ ಸಾಗರ್ ಬಿಟ್ಟರೆ ಈ ಕತೆಯನ್ನು ಇಷ್ಟೊಂದು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ವೀಕ್ಷಕರಿಗೆ ಕೊಡುವ ಸಾಮರ್ಥ್ಯವಿರುವುದು ರಾಜಮೌಳಿಗೆ ಮಾತ್ರ.
ಹೀಗಾಗಿ ರಾಜಮೌಳಿ ರಾಮಾಯಣ ಸಿನಿಮಾ ಮಾಡಿ ಎಂದು ಟ್ವಿಟರ್ ನಲ್ಲಿ ಅಭಿಮಾನಿಗಳು ಟ್ರೆಂಡ್ ಮಾಡಿದ್ದಾರೆ. ಬಾಹುಬಲಿಯಂತಹ ಕಾಲ್ಪನಿಕ ಕತೆಯನ್ನೇ ನೈಜವೆನ್ನುಂತಹ ಕಟ್ಟಿಕೊಟ್ಟಿರುವ ರಾಜಮೌಳಿ ರಾಮಾಯಣವನ್ನು ಅಷ್ಟೇ ಸುಂದರವಾಗಿ ಚಿತ್ರಿಸುತ್ತಾರೆ ಎಂಬ ನಂಬಿಕೆ ಅಭಿಮಾನಿಗಳದ್ದು.