Select Your Language

Notifications

webdunia
webdunia
webdunia
Wednesday, 16 April 2025
webdunia

ರೆಬಲ್ ಸ್ಟಾರ್ ಅಂಬರೀಶ್ ಜತೆಗಿನ ಹಳೆಯ ವಿಡಿಯೋ ಶೇರ್ ಮಾಡಿಕೊಂಡ ಸುಮಲತಾ

ಅಂಬರೀಶ್
ಬೆಂಗಳೂರು , ಭಾನುವಾರ, 3 ಮೇ 2020 (08:49 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಪಾರ್ಟಿಗಳಲ್ಲಿ ಎಷ್ಟು ಲೈವ್ಲಿಯಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಇದೀಗ ಸುಮಲತಾ ಅಂಬರೀಶ್ ಅಂತಹದ್ದೇ ಒಂದು ಹಳೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಶೇರ್ ಮಾಡಿಕೊಂಡಿದ್ದಾರೆ.


ರೆಬಲ್ ಸ್ಟಾರ್ ಅಂಬರೀಶ್ ಜತೆಗೆ ಸ್ನೇಹಿತರ ಮದುವೆ ಸಂಗೀತ ಕಾರ್ಯಕ್ರಮವೊಂದರಲ್ಲಿ ಸುಮಲತಾ ಮೊನ್ನೆಯಷ್ಟೇ ನಿಧನರಾದ ಬಾಲಿವುಡ್ ನಟ ರಿಷಿ ಕಪೂರ್ ಅಭಿನಯದ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಹಾಕಿದ್ದಾರೆ.

ಈ ವಿಡಿಯೋದಲ್ಲಿ ಅಂಬರೀಶ್ ಸುಮಲತಾ ಜತೆ ಖುಷಿ ಖುಷಿಯಾಗಿ ಹೆಜ್ಜೆ ಹಾಕುತ್ತಿರುವುದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರೆ, ಸುಮಲತಾ ಈ ಮೂಲಕ ಅಗಲಿದ ನಟ ರಿಷಿ ಕಪೂರ್ ಗೆ ಗೌರವ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕಲಚೇತನ ಕಲಾವಿದರಿಗೆ ಧನಸಹಾಯ ಮಾಡಿದ ನಟ ಸಲ್ಮಾನ್ ಖಾನ್