ವಿಕಲಚೇತನ ಕಲಾವಿದರಿಗೆ ಧನಸಹಾಯ ಮಾಡಿದ ನಟ ಸಲ್ಮಾನ್ ಖಾನ್

ಶನಿವಾರ, 2 ಮೇ 2020 (10:55 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ವಿಕಲಚೇತನ ಕಲಾವಿದರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಧನಸಹಾಯ ಮಾಡಿದ್ದಾರೆ.


ಇದಕ್ಕೂ ಮೊದಲು ಚಿತ್ರರಂಗದ ಕಾರ್ಮಿಕರಿಗೆ ಧನ ಸಹಾಯ ಮಾಡಿ ಸುದ್ದಿಯಾಗಿದ್ದ ಸಲ್ಮಾನ್ ಖಾನ್ ಇದೀಗ ವಿಕಲಚೇತನ ಕಲಾವಿದರಿಗೆ (ಕುಳ್ಳ ಕಲಾವಿದರು) ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ದೈಹಿಕವಾಗಿ ಗಿಡ್ಡ ದೇಹ ಹೊಂದಿರುವ ಕಲಾವಿದರಿಗೆ ತಲಾ 3000 ರೂ.ಗಳ ಧನಸಹಾಯ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಶ್ಮೀರವನ್ನು ಪುನರ್ ಸೃಷ್ಟಿಸಲಿದೆ ‘ರೆಮೋ’ ಚಿತ್ರತಂಡ