ರಿಷಿ ಕಪೂರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಪುತ್ರಿ ರಿಧಿಮಾ

ಶುಕ್ರವಾರ, 1 ಮೇ 2020 (11:28 IST)
ನವದೆಹಲಿ: ನಿನ್ನೆಯಷ್ಟೇ ನಿಧನರಾದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಪುತ್ರಿ ರಿಧಿಮಾ ಕಪೂರ್ ಭಾವುಕರಾಗಿದ್ದರು.


ಲಾಕ್ ಡೌನ್ ನಿಂದಾಗಿ ದೆಹಲಿಯಲ್ಲಿದ್ದ ರಿಧಿಮಾ ನಿನ್ನೆ ಸಂಜೆ ನಡೆದ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ತಂದೆಯ ಅಂತಿಮ ದರ್ಶನ ಪಡೆಯಲು ಮುಂಬೈಗೆ ತೆರಳಲು ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಅಂತ್ಯಕ್ರಿಯೆ ಮುಗಿದು ಹೋಗಿದೆ.

ಇದೀಗ ದೆಹಲಿ ಸರ್ಕಾರದ ಅನುಮತಿ ಪಡೆದು ತವರು ಮುಂಬೈಗೆ ಮರಳುತ್ತಿರುವ ರಿಧಿಮಾ ಭಾವುಕರಾಗಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಮ್ಮನಿಗೆ ತವರಿಗೆ ಮರಳುತ್ತಿರುವುದಾಗಿ ಸಂದೇಶ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಿರಂಜೀವಿ ಸಿನಿಮಾದಿಂದ ಕಾಜಲ್ ಅಗರ್ವಾಲ್ ಹೊರಕ್ಕೆ? ಕಾರಣವೇನು ಗೊತ್ತಾ?