ಮುಂಬೈ: ಇಂದು ಬೆಳಿಗ್ಗೆ ನಿಧನರಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಂತ್ಯಕ್ರಿಯೆ ಮುಂಬೈನ ರುದ್ರಭೂಮಿಯಲ್ಲಿ ನಡೆಯಿತು. ಪುತ್ರ ರಣಬೀರ್ ಕಪೂರ್ ಅಂತಿಮ ವಿಧಿ ವಿಧಾನ ನೆರವೇರಿಸಿದರು.
ಮುಂಬೈನ ಖಾಸಗಿ ಆಸ್ಪತ್ರೆಯಿಂದ ನೇರವಾಗಿ ರಿಷಿ ಕಪೂರ್ ಮೃತದೇಹವನ್ನು ಚಂದನ್ ವಾಡಿ ರುದ್ರಭೂಮಿಗೆ ಕರೆದೊಯ್ಯಲಾಯಿತು. ಇಲ್ಲಿ ರಣಬೀರ್ ಕಪೂರ್ ಅಂತಿಮ ಕ್ರಿಯೆಯ ವಿಧಾನ ವಿಧಾನ ನೆರವೇರಿಸಿದರು.
ಲಾಕ್ ಡೌನ್ ಇರುವುದರಿಂದ ಅಭಿಮಾನಿಗಳ ದರ್ಶನಕ್ಕೆ ಅವಕಾಶವಿರಲಿಲ್ಲ. ಕುಟುಂಬಸ್ಥರು ಸೇರಿದಂತೆ ಕೇವಲ 20 ಮಂದಿ ಮಾತ್ರ ಪಾಲ್ಗೊಂಡಿದ್ದರು. ಪತ್ನಿ, ಪುತ್ರ ರಣಬೀರ್ ಕಪೂರ್, ಬಾಲಿವುಡ್ ನಟರಾದ ಅಭಿಷೇಕ್ ಬಚ್ಚನ್, ಕರೀನಾ ಕಪೂರ್, ಸೈಫ್ ಅಲಿ ಖಾನ್ ಮುಂತಾದವರು ಅಂತಿಮ ಕ್ರಿಯೆಯಲ್ಲಿ ಭಾಗಿಯಾಗಿದ್ದರು.