Select Your Language

Notifications

webdunia
webdunia
webdunia
webdunia

ಕೊನೆಗೂ ರಿವೀಲ್ ಆಯ್ತು ರಾಕಿಂಗ್ ಸ್ಟಾರ್ ಯಶ್ ಜ್ಯೂನಿಯರ್ ಫೋಟೋ!

ಕೊನೆಗೂ ರಿವೀಲ್ ಆಯ್ತು ರಾಕಿಂಗ್ ಸ್ಟಾರ್ ಯಶ್ ಜ್ಯೂನಿಯರ್ ಫೋಟೋ!
ಬೆಂಗಳೂರು , ಗುರುವಾರ, 30 ಏಪ್ರಿಲ್ 2020 (16:44 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಪುತ್ರನ ಹೇಗಿದ್ದಾನೆಂಬ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಧಿಕಾ ಮತ್ತು ಯಶ್ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರನ ಫೋಟೋ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.


ನಿನ್ನೆಯೇ ರಾಧಿಕಾ ತಮ್ಮ ಪುತ್ರನ ಫೋಟೋ ರಿವೀಲ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮುದ್ದು ಮಗನ ಫೋಟೋ ಹಂಚಿಕೊಂಡಿದ್ದು ನಿಮ್ಮ ಆಶೀರ್ವಾದ, ಹಾರೈಕೆ ಈ ನಮ್ಮ ಮುದ್ದು ಮಗನ ಮೇಲೂ ಇರಲಿ ಎಂದಿದ್ದಾರೆ.

ಪಕ್ಕಾ ಮಗಳು ಐರಾನಂತೇ ಕಾಣುವ ಯಶ್ ಪುತ್ರನಿಗೆ ಇಂದು ಆರು ತಿಂಗಳು ತುಂಬಿದೆ. ಆದರೆ ಇನ್ನೂ ಈ ಮಗುವಿನ ಹೆಸರು ನಿರ್ಧಾರವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಿ ಕಪೂರ್ ನಿಧನಕ್ಕೆ ಗಣ್ಯರ ಸಂತಾಪ