Select Your Language

Notifications

webdunia
webdunia
webdunia
webdunia

ಪುನೀತ್ ರಾಜಕುಮಾರ್ ‘ಆಕಾಶ್ ಆಗಿ ಇಂದಿಗೆ 15 ವರ್ಷ

ಪುನೀತ್ ರಾಜಕುಮಾರ್ ‘ಆಕಾಶ್ ಆಗಿ ಇಂದಿಗೆ 15 ವರ್ಷ
ಬೆಂಗಳೂರು , ಬುಧವಾರ, 29 ಏಪ್ರಿಲ್ 2020 (10:08 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲನಟನಾಗಿ ಶ್ರೇಷ್ಠ ಅಭಿನಯ ಮಾಡಿದ್ದರೂ ಅದರ ನಡುವೆ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದರು.


ಅವರು ಪೂರ್ಣಪ್ರಮಾಣದಲ್ಲಿ ನಾಯಕಾರಿ ನಟಿಸಿದ ಮೊದಲ ಚಿತ್ರ ‘ಅಪ್ಪು’. ಈ ಸಿನಿಮಾದ ಬಳಿಕ ಜನರೂ ಅವರನ್ನು ಪ್ರೀತಿಯಿಂದ ಅಪ್ಪು ಎಂದೇ ಕರೆಯಲು ಪ್ರಾರಂಭಿಸಿದ್ದರು. ಇದಾದ ಬಳಿಕ ಪವರ್ ಸ್ಟಾರ್ ಸಾಲು ಸಾಲು ಹಿಟ್ ಚಿತ್ರ ಕೊಟ್ಟಿದ್ದರು. ಅದರಲ್ಲಿ ರಮ್ಯಾ ಜತೆ ನಟಿಸಿದ್ದ ‘ಆಕಾಶ್’ ಸಿನಿಮಾವೂ ಒಂದು.

ಈ ಸಿನಿಮಾ ಸೂಪರ್ ಹಿಟ್ ಆಗಿ ಶತನದಿನೋತ್ಸವ ಆಚರಿಸಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 15 ವರ್ಷ. ಪುನೀತ್-ರಮ್ಯಾ ಸೂಪರ್ ಹಿಟ್ ಜೋಡಿ ಎಂದು ಮತ್ತೆ ಸಾಬೀತುಪಡಿಸಿದ ಈ ಸಿನಿಮಾವನ್ನು ಇಂದಿಗೂ ಪ್ರೇಕ್ಷಕರು ನೆನೆಸಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಶ್ರೀ ರವಿಶಂಕರ್ ಗುರೂಜಿ ಜತೆ ಸೃಜನ್ ಲೋಕೇಶ್ ಲೈವ್