Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ಹಾಡಿನ ರೆಕಾರ್ಡ್: ಆನಂದ್ ಅಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಗರಂ

ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟೈಟಲ್ ಹಾಡು ನಿನ್ನೆಯಷ್ಟೇ ಲಾಂಚ್ ಆಗಿದೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವ್ಯೂ ಪಡೆದಿತ್ತು. ಆದರೆ ಇದು ದಾಖಲೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಆನಂದ್ ಅಡಿಯೋ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ.


ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ‘ಆಕಾಶನೆ ಅಧಿರಿಸುವ’ ಎಂಬ ಹಾಡು ನಿನ್ನೆ ಬೆಳಿಗ್ಗೆ 10 ಗಂಟೆಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಂದರೆ ಮೂರು ಗಂಟೆ 20 ನಿಮಿಷದ ಅವಧಿಯಲ್ಲಿ 1 ಮಿಲಿಯನ್ ವೀಕ್ಷಣೆ ಪಡೆಯಿತು. ಇದು ದಾಖಲೆ ಎಂದು ಕಿಚ್ಚ ಅಭಿಮಾನಿಗಳೂ ಖುಷಿಪಟ್ಟಿದ್ದರು.

ಆದರೆ ಆನಂದ್ ಅಡಿಯೋ ತಪ್ಪು ಮಾಹಿತಿ ಕೊಡುತ್ತಿದೆ. ಇದಕ್ಕೂ ಮೊದಲು ಡಿ ಬಾಸ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾದ ‘ಶಿವನಂದಿ’ ಹಾಡು ಕೇವಲ 3 ಗಂಟೆಗಳಲ್ಲಿ 1 ಮಿಲಿಯನ್ ವ್ಯೂ ಪಡೆದಿತ್ತು ಎಂದು ದರ್ಶನ್ ಅಭಿಮಾನಿಗಳು ಕೆಂಡ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್ ಅಂಬರೀಶ್ ನಾಯಿಗಳೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿವೆ ನೋಡಿ!