Select Your Language

Notifications

webdunia
webdunia
webdunia
webdunia

ಜೀ ಕನ್ನಡದಲ್ಲಿ ಮತ್ತೆ ಪ್ರಸಾರವಾಗಲಿದೆ ಶಂಕರ್ ನಾಗ್ ‘ಮಾಲ್ಗುಡಿ ಡೇಸ್’

ಜೀ ಕನ್ನಡದಲ್ಲಿ ಮತ್ತೆ ಪ್ರಸಾರವಾಗಲಿದೆ ಶಂಕರ್ ನಾಗ್ ‘ಮಾಲ್ಗುಡಿ ಡೇಸ್’
ಬೆಂಗಳೂರು , ಸೋಮವಾರ, 4 ಮೇ 2020 (09:00 IST)
ಬೆಂಗಳೂರು: ದೂರದರ್ಶನ ವಾಹಿನಿ ತನ್ನ ಹಳೆಯ ಪೌರಾಣಿಕ ಧಾರವಾಹಿಗಳನ್ನು ಮರು ಪ್ರಸಾರ ಮಾಡಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದೇ ಹಾದಿಯಲ್ಲಿ ಇದೀಗ ಜೀ ಕನ್ನಡ ವಾಹಿನಿ ಕೂಡಾ ಹೆಜ್ಜೆ ಹಾಕುತ್ತಿದೆ.


ಲಾಕ್ ಡೌನ್ ವೇಳೆ ಧಾರವಾಹಿಗಳ ಹೊಸ ಎಪಿಸೋಡ್ ಗಳ ಪ್ರಸಾರ ಮಾಡಲು ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಈಗಿರುವ ಧಾರವಾಹಿಗಳ ಹಳೆಯ ಎಪಿಸೋಡ್ ಗಳನ್ನೇ ಮರು ಪ್ರಸಾರ ಮಾಡಿದ್ದಾಯ್ತು. ಆದರೂ ಲಾಕ್ ಡೌನ್ ಮುಗಿಯುತ್ತಿಲ್ಲ.

ಹೀಗಾಗಿ ಈಗ ಜೀ ಕನ್ನಡ ವಾಹಿನಿ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಧಾರವಾಹಿಯನ್ನು ಪ್ರಸಾರ ಮಾಡಲು ಹೊರಟಿದೆ. ಯಾವಾಗಿನಿಂದ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯಾಗ್ತಾರಾ ತಮನ್ನಾ?