Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಮುಗಿದ ಮೇಲೆ ಧಾರವಾಹಿ ಶೂಟಿಂಗ್ ಆರಂಭ

ಲಾಕ್ ಡೌನ್ ಮುಗಿದ ಮೇಲೆ ಧಾರವಾಹಿ ಶೂಟಿಂಗ್ ಆರಂಭ
ಬೆಂಗಳೂರು , ಗುರುವಾರ, 16 ಏಪ್ರಿಲ್ 2020 (09:19 IST)
ಬೆಂಗಳೂರು: ಲಾಕ್ ಡೌನ್ ವೇಳೆ ಮನೆಯಲ್ಲಿರುವಾಗ ಧಾರವಾಹಿ ನೋಡುತ್ತಾ ಕಾಲ ಕಳೆಯೋಣವೆಂದರೆ ಅಲ್ಲೂ ಹೊಸ ಎಪಿಸೋಡ್ ಗಳಿಲ್ಲದೇ ವೀಕ್ಷಕರು ಬೇಸರದಲ್ಲಿದ್ದಾರೆ.


ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು, ಅದಾದ ಬಳಿಕವೇ ಧಾರವಾಹಿ ಶೂಟಿಂಗ್ ಮುಂದುವರಿಸಲು ವಾಹಿನಿಗಳು ನಿರ್ಧರಿಸಿವೆ. ಅಲ್ಲಿಯವರೆಗೆ ಹಳೆಯ ಧಾರವಾಹಿಗಳು, ರಿಯಾಲಿಟಿ ಶೋಗಳು, ಚಲನಚಿತ್ರಗಳನ್ನೇ ಪ್ರಸಾರ ಮಾಡುತ್ತಾ ಸಮಯ ಕಳೆಯುತ್ತಿವೆ.

ಜೊತೆ ಜೊತೆಯಲಿ ಧಾರವಾಹಿ ನಾಯಕ ನಟ ಅನಿರುದ್ಧ್ ಗೆ ಅಭಿಮಾನಿಯೊಬ್ಬರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದು, ಲಾಕ್ ಡೌನ್ ಮುಗಿದ ತಕ್ಷಣವೇ ಧಾರವಾಹಿ ಶೂಟಿಂಗ್ ಆರಂಭಿಸುತ್ತೇವೆ. ಅಲ್ಲಿಯವರೆಗೆ ತಾಳ್ಮೆಯಿಂದಿರಿ ಎಂದು ಸಮಾಧಾನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದ ವಿಡಿಯೋವೊಂದನ್ನು ಪ್ರಕಟಿಸಿದ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?